ಬೀಜಿಂಗ್: ಹೌಸ್ಟನ್ ನಲ್ಲಿರುವ ಚೀನಾ ರಾಯಭಾರಿ ಕಚೇರಿಯನ್ನು ಮುಚ್ಚಲು ಅಮೆರಿಕಾ ಸೂಚನೆ ನೀಡಿದ್ದು, ಉಭಯ ದೇಶಗಳ ನಡುವಿನ ಜಟಾಪಟಿ ತಾರಕಕ್ಕೇರಿದೆ.
									
										
								
																	
ಕೊರೋನಾ ಹರಡಿದ ಬಳಿಕ ಚೀನಾ ಮೇಲೆ ಅಮೆರಿಕಾ ಪಿತ್ತ ನೆತ್ತಿಗೇರಿದೆ. ಹೀಗಾಗಿ ಚೀನಾ ಕಂಪನಿಗಳಿಗೆ, ಜನರಿಗೆ ತನ್ನ ದೇಶದಲ್ಲಿ ಜಾಗವಿಲ್ಲ ಎಂದು ಸಾರಿ ಸಾರಿ ಹೇಳುತ್ತಲೇ ಇದೆ. ಇದೀಗ ರಾಯಭಾರಿ ಕಚೇರಿಯನ್ನೂ ತೆರವುಗೊಳಿಸಲು ಸೂಚನೆ ನೀಡಿರುವುದು ಉಭಯ ದೇಶಗಳ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದೆ.
									
			
			 
 			
 
 			
			                     
							
							
			        							
								
																	ಅಮೆರಿಕಾದ ಈ ನಡೆಯನ್ನು ಚೀನಾ ಖಂಡಿಸಿದ್ದು, ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ವುಹಾನ್ ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯನ್ನೂ ತೆರವುಗೊಳಿಸಲು ಚೀನಾ ಚಿಂತನೆ ನಡೆಸಿದೆ.