Select Your Language

Notifications

webdunia
webdunia
webdunia
Sunday, 13 April 2025
webdunia

ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ಹಾರಿದ ಶಾರುಖ್‌ ಖಾನ್

Shah Rukh Khan Flies To US

Sampriya

ಮುಂಬೈ , ಮಂಗಳವಾರ, 30 ಜುಲೈ 2024 (15:18 IST)
Photo Courtesy X
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರು ತನ್ನ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದಾರೆ ಎಂದು ಸೂಪರ್‌ಸ್ಟಾರ್‌ಗೆ ಹತ್ತಿರವಿರುವ ಮೂಲಗಳು ಖಚಿತಪಡಿಸಿವೆ.

ಬಾಲಿವುಡ್ ಮೂಲಗಳ ಪ್ರಕಾರ, ಜುಲೈ 29ರಂದು ಶಾರುಖ್ ಖಾನ್ ಮುಂಬೈ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಯೇ ಚಿಕಿತ್ಸೆ ಪಡೆಯಲು ಬಯಸಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ. ಈ ಹಿನ್ನೆಲೆ ಇದೀಗ ಶಾರುಖ್ ಖಾನ್ ಅವರು ವಿದೇಶಕ್ಕೆ ಹೊರಟಿದ್ದಾರೆ ಎನ್ನಲಾಗಿದೆ.

ಈ ವರ್ಷದ ಆರಂಭದಲ್ಲಿ ಐಪಿಎಲ್ ವೇಳೆ ಬಿಸಿ ಆಘಾತಕ್ಕೆ  ಶಾರುಖ್ ಖಾನ್  ಅವರು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಅದರಲ್ಲಿ ಚೇತರಿಸಿಕೊಂಡ ನಂತರ ನಟ ಐಪಿಎಲ್ ಫೈನಲ್‌ಗೆ ಹಾಜರಾದರು, ಅಲ್ಲಿ ಅವರ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೆದ್ದಿತು.

ವೃತ್ತಿಪರವಾಗಿ 2023 ರಲ್ಲಿ ಶಾರುಖ್ ಖಾನ್ ಅವರ ಸಿನಿಮಾಗಳು ಹಿಟ್ ಆಗಿವೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಜೊತೆಗೆ ಕಳೆದ ವರ್ಷ 'ಪಠಾಣ್' ಭಾರೀ ಸದ್ದು ಮಾಡಿತ್ತು. ಇನ್ನೂ  ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ವಿಜಯ್ ಸೇತುಪತಿ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಅಟ್ಲೀ ಅವರ ನಿರ್ದೇಶನದ 'ಜವಾನ್' ಸಿನಿಮಾವೂ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತು. ಅದಲ್ಲದೆ ತಾಪ್ಸೀ ಪನ್ನು, ವಿಕ್ಕಿ ಕೌಶಲ್ ಮತ್ತು ಬೋಮನ್ ಇರಾನಿ ಅವರೊಂದಿಗೆ ಸಹ-ನಟರಾಗಿ ರಾಜ್‌ಕುಮಾರ್ ಹಿರಾನಿಯವರ 'ಡಂಕಿ' ಸಿನಿಮಾದೊಂದಿಗೆ ಆ ವರ್ಷವನ್ನು ಯಶಸ್ವಿ ಚಿತ್ರಗಳೊಂದಿಗೆ ಕೊನೆಗೊಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಟಾಕ್ಸಿಕ್ ಗೆ ಬರ್ತಾರಾ ಸಲ್ಮಾನ್ ಖಾನ್: ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿರುವುದರ ರಹಸ್ಯವೇನು