Publish Date: Tue, 23 Mar 2021 (10:01 IST)
Updated Date: Tue, 23 Mar 2021 (10:03 IST)
ಬೆಂಗಳೂರು: ನಟ ಶಿವರಾಜ್ ಕುಮಾರ್ ಗೆ ಜೀವ ಬೆದರಿಕೆ ಹಿನ್ನಲೆಯಲ್ಲಿ ಅವರ ಮನೆಗೆ ನಾಲ್ವರು ಶಸ್ತ್ರಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ನಾಲ್ವರು ಶಸ್ತ್ರಸಜ್ಜಿತ ಸಿಬ್ಬಂದಿ ಜೊತೆಗೆ ಸ್ಥಳೀಯ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಿಂದಲೂ ಇಬ್ಬರನ್ನು ನಿಯೋಜಿಸಲಾಗಿದೆ. ಇಬ್ಬರು ಮನೆಯ ಗೇಟ್ ಬಳಿ, ಮತ್ತಿಬ್ಬರು ಮನೆಯ ಹೊರಾವರಣದಲ್ಲಿ ಹಾಗೂ ಒಬ್ಬ ಶಸ್ತ್ರಸಜ್ಜಿತ ಸಿಬ್ಬಂದಿ ಶಿವಣ್ಣ ಜೊತೆಗೆ ಹೊರಗಡೆ ಓಡಾಡುವಾಗ ಭದ್ರತೆ ನೀಡಲಿದ್ದಾರೆ.
ಶಿವಣ್ಣ, ಬಿಟಿ ಲಲಿತಾ ನಾಯಕರ್, ಸಿಟಿ ರವಿಗೆ ಪತ್ರ ಮುಖೇನ ಜೀವ ಬೆದರಿಕೆ ಕರೆ ಬಂದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಶಿವಣ್ಣ ಹಾಗೂ ಲಲಿತಾ ನಾಯಕ್ ಗೂ ಭದ್ರತೆ ನೀಡಿದೆ. ಮೇ 1 ರಂದು ಈ ಗಣ್ಯರ ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿತ್ತು. ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.