Publish Date: Tue, 23 Mar 2021 (09:53 IST)
Updated Date: Tue, 23 Mar 2021 (09:55 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ರಾಗಿಣಿ ದ್ವಿವೇದಿ ಮತ್ತೊಂದು ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ.
ರಾಗಿಣಿ ಜೈಲಿಗೆ ಹೋದ ಮೇಲೆ ಅವರ ಸಿನಿಮಾ ಭವಿಷ್ಯವೇ ಹಾಳಾಯ್ತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ತುಪ್ಪದ ಬೆಡಗಿ ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈಗಾಗಲೇ ಕರ್ವ 3 ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸುದ್ದಿ ಬಂದಿತ್ತು.
ಇದೀಗ ರಾಗಿಣಿ ಜಾನಿ ವಾಕರ್ ಎಂಬ ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ. ಈ ಸಿನಿಮಾದಲ್ಲಿ ರಾಗಿಣಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರಂತೆ. ಈ ಸಿನಿಮಾದ ಪಾತ್ರದ ಬಗ್ಗೆ ತನಗೆ ಭಾರೀ ನಿರೀಕ್ಷೆಯಿರುವುದಾಗಿ ರಾಗಿಣಿ ಹೇಳಿಕೊಂಡಿದ್ದಾರೆ.