Publish Date: Sat, 25 Jul 2020 (16:18 IST)
Updated Date: Sat, 25 Jul 2020 (16:23 IST)
ಬಾಲಿವುಡ್ ನಲ್ಲಿ ಚರ್ಚೆಗೆ ಒಳಗಾಗುತ್ತಿರುವ ನಟಿ ಕಂಗನಾ ರಣಾವತ್ ಗೆ ಕೇಂದ್ರ ಮಾಜಿ ಸಚಿವರೊಬ್ಬರು ಸಾಥ್ ನೀಡಿದ್ದಾರೆ.
ಚಿತ್ರೋದ್ಯಮದಲ್ಲಿ ಒಂದಷ್ಟು ಜನರು ನಟಿ ಕಂಗನಾ ರಣಾವತ್ ವಿರುದ್ಧ ಮಾತನಾಡುತ್ತಿರುವುದಕ್ಕೆ ಕೇಂದ್ರ ಮಾಜಿ ಸಚಿವ ಹಾಗೂ ಹಿರಿಯ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಗರಂ ಆಗಿದ್ದಾರೆ.
ಕಂಗನಾ ಬಗ್ಗೆ ಜಲಸ್ಸಿ ಇರುವುದರಿಂದಲೇ ಹಲವರು ಮಾತನಾಡುತ್ತಿದ್ದಾರೆ. ಇದಕ್ಕೆ ಯಾರ ಸಹಾಯ ಇಲ್ಲದೇ ಕಂಗನಾ ಸಾಧನೆ ಮಾಡುತ್ತಿರುವುದೇ ಕಾರಣ. ಕಂಗನಾ ಸಾಧನೆ ನೋಡಿ ಒಂದಷ್ಟು ಮಂದಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ ಎಂದು ನಟ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.