Select Your Language

Notifications

webdunia
webdunia
webdunia
webdunia

ಕನ್ನಡ ನನ್ನ ಮೊದಲ ಆದ್ಯತೆ: ನಟಿ ಅಶ್ವಿತಿ ಶೆಟ್ಟಿ- ಕೆಣಕಿದವರಿಗೆ ಬೋಲ್ಡ್ ಆಗಿ ಉತ್ತರ ನೀಡಿದ ಸ್ಯಾಂಡಲ್ವುಡ್ ನಟಿ

ಕನ್ನಡ ನನ್ನ ಮೊದಲ ಆದ್ಯತೆ: ನಟಿ ಅಶ್ವಿತಿ ಶೆಟ್ಟಿ- ಕೆಣಕಿದವರಿಗೆ ಬೋಲ್ಡ್ ಆಗಿ ಉತ್ತರ ನೀಡಿದ ಸ್ಯಾಂಡಲ್ವುಡ್ ನಟಿ
ಬೆಂಗಳೂರು , ಶನಿವಾರ, 25 ಜುಲೈ 2020 (13:42 IST)
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ನಟ ನಟಿಯರ ಕಾಲೆಳೆಯೋದು, ಅವ್ರ ಪೋಸ್ಟ್ ಗಳಿಗೆಕೆಟ್ಟದಾಗಿ ಕಮೆಂಟ್ ಹಾಕೋದು, ಟ್ರೋಲ್ ಮಾಡೋದು, ವೈಯಕ್ತಿಕ ತೇಜೋವಧೆ ಮಾಡೋದು ಈ ನಡುವೆ ಅತಿರೇಕಕ್ಕೆ ಹೋಗಿದೆ. ಒಳ್ಳೆಯ ಉದ್ದೇಶಕ್ಕೆ ಪ್ರಶ್ನೆ ಮಾಡಿದ್ರೆ ನಾವು ಸೈ ಅನ್ನೋಣ ಆದ್ರೆ ಅವ್ರು ಯಾವ ಪೋಸ್ಟ್ ಹಾಕಿದ್ರು, ಉದ್ದೇಶವೇನು, ವಿಮರ್ಶೆ ಮಾಡ್ದೆ, ಕಾರಣ ತಿಳಿಯದೇ ತೇಜೋವಧೆ ಮಾಡೋದು ತಪ್ಪು. 
ಇಂತಹ ಪರಿಸ್ಥಿತಿಯನ್ನು ಸ್ಯಾಂಡಲ್ವುಡ್ ಉದಯೋನ್ಮುಖ ನಟಿ ಅಶ್ವಿತಿ ಶೆಟ್ಟಿ ಇತ್ತಿಚೆಗೆಎದುರಿಸಿದ್ದು ಕೆಣಕಿದವ್ರಿಗೆ ಬೋಲ್ಡ್ ಆಗಿ ಉತ್ತರ ನೀಡಿದ್ದಾರೆ. ಕಾರಣ ತಿಳಿಯದೇ ಯಾರನ್ನು ಪ್ರಶ್ನಿಸಬಾರದು, ತೇಜೋವಧೆ ಮಾಡಬಾರದು ಎಂದು ಟ್ರೋಲ್ ಮಾಡಿದವರಿಗೆ ಸ್ಟ್ರೈಡ್ ಫಾರ್ವಡ್ ಆನ್ಸರ್ ನೀಡಿದ್ದಾರೆ.
 
ನಟಿ ಅಶ್ವಿತಿ ಶೆಟ್ಟಿ ನಟನೆ ಜೊತೆಗೆ ಜಾಹೀರಾತು ಹಾಗೂ ಹಲವು ನ್ಯಾಶನಲ್ ಬ್ರ್ಯಾಂಡ್ಗಳ ಪ್ರಮೋಟರ್ ಕೂಡ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್ ಒಂದರ ಪ್ರಮೋಷನ್ ಪೋಸ್ಟ್ ಮಾಡುವಾಗ ಇಂಗ್ಲೀಷ್ ಬಳಕೆಯನ್ನು ಮಾಡಿದ್ದಾರೆ. ಇದ್ರಿಂದ ಟೀಕೆಗಳ ಸುರಿಮಳೆಯನ್ನು ಎದುರಿಸಿದ್ದಾರೆ. ಕನ್ನಡ ಬಳಸಿ ಎಂದು ನಟಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ವ್ಯಕ್ತಿಯಂತೂ ಕೆಟ್ಟ ಪದ ಬಳಸಿ ಆಕೆಯನ್ನು ನಿಂದಿಸಿದ್ದಾನೆ.
webdunia
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ಗಳ ಸುರಿ ಮಳೆಯಾಗುತ್ತಿದ್ದಂತೆ ಒಬ್ಬಾತನ ಫೇಸ್ಬುಕ್ ಪ್ರೊಫೈಲ್ ಚೆಕ್ ಮಾಡಿ ನೀವೇಕೆ ನಿಮ್ಮ ಬಯೋಡೇಟಾವನ್ನು ಇಂಗ್ಲೀಷ್ನಲ್ಲಿ ಬರೆದುಕೊಂಡಿದ್ದೀರಾ ಎಂದು ಅಶ್ವಿತಿ ಶೆಟ್ಟಿ ಮರು ಪ್ರಶ್ನೆ ಮಾಡಿದ್ದಾರೆ. ಇದು ಎಲ್ಲರನ್ನು ಕೆರಳಿಸಿದ್ದು ಅಶ್ವಿತಿ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡು ಟ್ರೋಲ್ ಮಾಡಿದ್ದಾರೆ. ಕನ್ನಡದ ನಟಿಯಾಗಿ ಕನ್ನಡ ಬಳಸೋಕೆ ಯಾಕೆ ನಿಮಗೆ ಅಸಡ್ಡೆ ಎಂದು ಟೀಕೆಯ ಮಳೆ ಸುರಿಸಿದ್ದಾರೆ.
 
ಎಲ್ಲವನ್ನು ತಾಳ್ಮೆಯಿಂದ ಗಮನಿಸಿರುವ ಅಶ್ವಿತಿ ಶೆಟ್ಟಿ ಟ್ರೋಲಿಗರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನನ್ನ ಮೊದಲ ಆದ್ಯತೆ ಯಾವಾಗಲೂ ಕನ್ನಡ ಭಾಷೆಗೆ ಇರುತ್ತ್ತೆ. ನಾನು ಎಲ್ಲೇ ಯಾವುದೇ ಕಾರ್ಯಕ್ರಮಕ್ಕೆ ಹೋದರು ಮೊದಲು ಆಧ್ಯತೆ ನೀಡೋದು ಕನ್ನಡಕ್ಕೆ, ಸಂದರ್ಭ, ಸನ್ನೀವೇಶಗಳ ಕಾರಣದಿಂದಾಗಿ ಇಂಗ್ಲೀಷ್ ಬಳಸಬೇಕಾಗುತ್ತೆ. ಹಾಗೆಂದ ಮಾತ್ರಕ್ಕೆ ಇಂಗ್ಲೀಷ್ ಮೇಲೆ ವ್ಯಾಮೋಹ ಎಂದು ನಿರ್ಧರಿಸೋದು ತಪ್ಪು. 
webdunia
ನಟನೆ ಜೊತೆಗೆ ಹಲವು ಬ್ರ್ಯಾಂಡ್ಗಳ ಪ್ರಮೋಟರ್ ಆಗಿದ್ದೇನೆ. ಆದ್ರಿಂದ ಅವ್ರು ಹೇಳಿದ ಹಾಗೆ ನಾವು ಪೋಸ್ಟ್ ಹಾಕಬೇಕು. ಇದು ನ್ಯಾಷನಲ್ ಬ್ರ್ಯಾಂಡ್ ಆದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಇಂಗ್ಲೀಷ್ನಲ್ಲಿಯೇ ಪೋಸ್ಟ್ ಮಾಡಬೇಕಿತ್ತು ಅಷ್ಟೇ. ಹಾಗೆಂದ ಮಾತ್ರಕ್ಕೆ ಕನ್ನಡ ಭಾಷೆ ಮೇಲೆ ಅಭಿಮಾನ ಇಲ್ಲ, ಇಂಗ್ಲೀಷ್ ಮೇಲೆ ವ್ಯಾಮೋಹ ಎಂದು ಅರ್ಥೈಸೋದು ತಪ್ಪು ಎಂದು ಕಾರಣ ತಿಳಿಯದೇ ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ್ದಾರೆ.  ಅಷ್ಟೇ ಅಲ್ಲ ತಮ್ಮನ್ನು ಕೆಟ್ಟ ಪದಗಳಿಂದ ನಿಂದಿಸಿದ ವ್ಯಕ್ತಿಗೂ ಬುದ್ದಿ ಮಾತು ಹೇಳಿರುವ ಅಶ್ವಿತಿ ಶೆಟ್ಟಿ ಭಾಷೆ ಮೇಲೆ ಅಭಿಮಾನ ಇರುವವರು ಬೇರೊಬ್ಬರ ಜೊತೆ ಮಾತನಾಡುವಾಗ ಒಳ್ಳೆಯ ಪದ ಬಳಕೆ ಮಾಡಬೇಕು ಕೆಟ್ಟ ಪದಬಳಕೆ ಮಾಡಿದ್ರೆ ಅದು ನೀವು ಭಾಷೆಗೆ ಮಾಡುವ ಅವಮಾನ ಎಂದಿದ್ದಾರೆ.
 
ಅಶ್ವಿತಿ ಶೆಟ್ಟಿ ಕಳೆದ ಆರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ರಾಮಾಚಾರಿ,ಅನಂತು ವರ್ಸಸ್ ನುಸ್ರತ್ ಸಿನಿಮಾ, ಶೋಕಿವಾಲ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಅಶ್ವಿತಿ ಶೆಟ್ಟಿ ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಸಹೋದರಿ ಅದ್ವಿತಿ ಶೆಟ್ಟಿ ಜೊತೆ ಸೇರಿ ಹಲವಾರು ಬಡ ಕುಟುಂಬಗಳ ಹಸಿವು ನೀಗಿಸೋ ಕೆಲಸ ಮಾಡಿದ್ದಾರೆ, ಸಹಾಯ ಹಸ್ತ ಚಾಚಿದ್ದಾರೆ. ಏನೇ ಇರಲಿ ಸುಖಾ ಸುಮ್ಮನೇ ಕಾಲೆಳೆಯುವವರಿಗೆ ನಟಿ ಅಶ್ವಿತಿ ಶೆಟ್ಟಿ ಮಾತುಗಳು ಪಾಠವಾಗಲಿ. ಟೀಕೆ ಮಾಡೋಕು ಮೊದಲು ಸ್ವಲ್ಪ ಯೋಚಿಸೋದು ಒಳ್ಳೆಯದು ಏನಂತೀರಾ..?

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನೆಪೋಟಿಸಂ : ನಟಿ ಕಂಗನಾಗೆ ಕ್ರಿಕೆಟರ್ ಸಾಥ್