Publish Date: Sun, 19 Jul 2020 (11:08 IST)
Updated Date: Sun, 19 Jul 2020 (11:09 IST)
ಮುಂಬೈ: ಕೊರೋನಾ ಸೋಂಕಿತರಾಗಿರುವ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಪುತ್ರ ಅಭಿಷೇಕ್, ಸೊಸೆ ಐಶ್ವರ್ಯಾ ಮತ್ತು ಮೊಮ್ಮಗಳು ಆರಾಧ‍್ಯ ಜತೆಗಿರುವ ಫೋಟೋ ಪ್ರಕಟಿಸಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಸಿದ್ದಾರೆ.
ಈ ನಾಲ್ವರೂ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಕುಟುಂಬ ಶೀಘ್ರ ಗುಣಮುಖರಾಗುವಂತೆ ಸೆಲೆಬ್ರಿಟಿಗಳು ಮಾತ್ರವಲ್ಲದೆ, ಅಭಿಮಾನಿಗಳೂ ಪೂಜೆ, ಹವನ ಮಾಡಿ ಪ್ರಾರ್ಥಿಸುತ್ತಿದ್ದಾರೆ.
ಅಭಿಮಾನಿಗಳ ಅಭಿಮಾನಕ್ಕೆ ಹೃದಯ ತುಂಬಿ ಧನ್ಯವಾದ ಸಲ್ಲಿಸಿರುವ ಬಿಗ್ ಬಿ ನಿಮ್ಮ ಪ್ರೀತಿ, ಹಾರೈಕೆ ನಮಗೆ ಕೇಳಿಸುತ್ತಿದೆ. ಕೈ ಮುಗಿದು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.