ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೊ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಲಿದೆ.
									
			
			 
 			
 
 			
			                     
							
							
			        							
								
																	ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೊ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮನು ಎಂಬ ಯುವಕನ ಪಾತ್ರ ಮಾಡುತ್ತಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಮೂಡಿಬರಲಿದೆ. ಮೊದಲ ಭಾಗ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ.
									
										
								
																	ಇಂದು ಸಂಜೆ 6.06 ಕ್ಕೆ ಟ್ರೈಲರ್ ಲಾಂಚ್ ಆಗಲಿದೆ. ಈಗಾಗಲೇ ಪರಭಾಷೆಗಳಲ್ಲೂ ಸಿನಿಮಾ ರಿಲೀಸ್ ಗೆ ಬೇಡಿಕೆ ಬರುತ್ತಿದೆ. ಹೀಗಾಗಿ ಮುಂದೆ ಪರಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾದರೂ ಅಚ್ಚರಿಯಿಲ್ಲ.