ಯುವರಾಜ್‌ ಪತ್ನಿ ಆರೋಪಕ್ಕೆ ಸಪ್ತಮಿ ಕುಟುಂಬ ಫುಲ್‌ಗರಂ, ಕಾನೂನು ಹೋರಾಟಕ್ಕೆ ಸಿದ್ಧತೆ

Sampriya
ಮಂಗಳವಾರ, 11 ಜೂನ್ 2024 (17:31 IST)
Photo Courtesy X
ಬೆಂಗಳೂರು: ದೊಡ್ಮನೆಯ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ವಿಚ್ಚೇದನ ಜಟಾಪಟಿ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.  ಯುವ ಆರೋಪಕ್ಕೆ ಲೀಗಲ್ ನೋಟಿಸ್ ಮೂಲಕ ಉತ್ತರಿಸಿರುವ ಶ್ರೀದೇವಿ ಗಂಭೀರ ಆರೋಪ ಮಾಡಿದ್ದಾರೆ. ಯುವ ರಾಜ್‌ಕುಮಾರ‌್‌ಗೆ ನಟಿ ಸಪ್ತಮಿ ಗೌಡ ಜೊತೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.

ಶ್ರೀದೇವಿ ಲೀಗಲ್ ನೋಟಿಸ್‌ನಲ್ಲಿ ನಟಿ ಸಪ್ತಮಿ ಗೌಡ ಹೆಸರು ಉಲ್ಲೇಖಿಸಿರುವುದಕ್ಕೆ ಕಾಂತಾರ ನಟಿ ಹಾಗೂ ಕುಟುಂಬಸ್ಥರು ಗರಂ ಆಗಿದ್ದಾರೆ. ಇದೀಗ ಶ್ರೀದೇವಿ ಭೈರಪ್ಪ ವಿರುದ್ದ ಮಾನಹಾನಿ ಕೇಸ್ ದಾಖಲಿಸಲು ಸಪ್ತಮಿ ಗೌಡ ಕುಟುಂಬ ಮುಂದಾಗಿದೆ.

ಯುವರಾಜ್ ಕುಮಾರ್ ಹಾಗೂ ನಟಿ ಸಪ್ತಮಿ ಗೌಡ ರಿಲೇಶನ್‌ ಶಿಪ್‌ನಲ್ಲಿದ್ದಾರೆ. ಇವರಿಬ್ಬರು ಒಂದೇ ರೂಮ್‌ನಲ್ಲಿ ತಂಗಿದ್ದಾರೆ ಎಂದು ಲೀಗಲ್ ನೋಟಿಸ್‌ಗೆ ಶ್ರೀದೇವಿ ಉತ್ತರಿಸಿದ್ದರು. ಶ್ರೀದೇವಿ ಮಾಡಿದ ಗಂಭೀರ ಆರೋಪ ಭಾರಿ ಕೋಲಾಹಲ ಸೃಷ್ಟಿಸಿದೆ.

ಶ್ರೀದೇವಿ ಆರೋಪಗಳಿಂದ ನಟಿ ಸಪ್ತಮಿ ಗೌಡ ಹಾಗೂ ಸಪ್ತಮಿ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ನಡುವಿನ ವಿಚ್ಚೇದನದಲ್ಲಿ ನಮ್ಮ ಪುತ್ರಿಯನ್ನು ಎಳೆದು ತಂದಿದ್ದೇಕೆ? ಯಾವ ಆಧಾರದಲ್ಲಿ ಸಪ್ತಮಿ ಗೌಡ ಹೆಸರು ಉಲ್ಲೇಖಿಸಿದ್ದಾರೆ ಎಂದು ಸಪ್ತಮಿ ಪೋಷಕರು ಆಕ್ರೋಶಗೊಂಡಿದ್ದಾರೆ. ಸಪ್ತಮಿ ಗೌಡ ಜೊತೆ ಸಮಾಲೋಚಿಸಿ ಕಾನೂನು ಹೋರಾಟಕ್ಕೆ ಸಪ್ತಮಿ ಕುಟುಂಬ ನಿರ್ಧರಿಸಿದೆ.

ಇಲ್ಲಸಲ್ಲದ ಆರೋಪ ಮಾಡಿ ಸಪ್ತಮಿ ಹಾಗೂ ನಮ್ಮ ಘನತೆ ಧಕ್ಕೆ ತಂದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಕಾನೂನು ರೀತಿಯಲ್ಲೇ ಹೋರಾಟ ಮಾಡುವುದಾಗಿ ಸಪ್ತಮಿ ಗೌಡ ಪೋಷಕರು ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಮುಂದಿನ ಸುದ್ದಿ
Show comments