Publish Date: Tue, 11 Jun 2024 (11:49 IST)
Updated Date: Tue, 11 Jun 2024 (11:51 IST)
ಬೆಂಗಳೂರು: ಮರ್ಡರ್ ಕೇಸ್ ಒಂದರಲ್ಲಿ ನಟ ದರ್ಶನ್ ಅರೆಸ್ಟ್ ಆದ ಬೆನ್ನಲ್ಲೇ ಅವರ ಆಪ್ತೆ ಪವಿತ್ರಾ ಗೌಡ ಮತ್ತು ದರ್ಶನ್ ಬಾಡಿ ಗಾರ್ಡ್ ಗಳನ್ನೂ ಅರೆಸ್ಟ್ ಮಾಡಲಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತ ಪ್ರಾಣ ಬಿಟ್ಟಿದ್ದ. ಜೂನ್ 8 ರಂದು ಘಟನೆ ನಡೆದಿತ್ತು ಎನ್ನಲಾಗಿದೆ. ಚಿತ್ರದುರ್ಗದಲ್ಲಿ ಫಾರ್ಮ್ ಹೌಸ್ ಒಂದರಲ್ಲಿ ನೌಕರನಾಗಿದ್ದ ಈತ ಪವಿತ್ರಾಗೆ ಅಶ್ಲಿಲ ಮೆಸೇಜ್ ಮಾಡಿದ್ದ ಎನ್ನುವುದು ಆರೋಪ.
ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ದರ್ಶನ್ ಬಗ್ಗೆ ಸುಳಿವು ಸಿಕ್ಕಿತ್ತು. ದರ್ಶನ್ ರನ್ನು ಮೈಸೂರಿನ ಹೋಟೆಲ್ ಒಂದರಿಂದ ಬಂಧಿಸಲಾಗಿತ್ತು. ಅವರ ಜೊತೆಗೆ ಅವರ ಬಾಡಿ ಗಾರ್ಡ್ ಗಳನ್ನೂ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿದ್ದ ಪವಿತ್ರಾ ಗೌಡರನ್ನೂ ಬಂಧಿಸಲಾಗಿತ್ತು.
ಇದೀಗ ಆರ್ ಆರ್ ನಗರದ ಪೊಲೀಸರು ಎಲ್ಲರನ್ನೂ ಠಾಣೆಯಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆ ಪ್ರಕರಣವಾಗಿರುವುದರಿಂದ ದರ್ಶನ್ ಸಂಕಷ್ಟಕ್ಕೀಡಾಗಿದ್ದಾರೆ.