Select Your Language

Notifications

webdunia
webdunia
webdunia
webdunia

ಡಾ ರಾಜ್ ಕುಮಾರ್ ಮರ್ಯಾದೆ ಬೀದಿಗೆ ಬಂತು, ಅಪ್ಪು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದ ಫ್ಯಾನ್ಸ್

Yuva Rajkumar
ಬೆಂಗಳೂರು: ಯುವರಾಜ್ ಕುಮಾರ್ ವಿಚ್ಛೇದನ ವಿಚಾರವಾಗಿ ಅಭಿಮಾನಿಗಳು ಡಾ ರಾಜ್ ಕುಮಾರ್ ಕುಟುಂಬದ ಪರಿಸ್ಥಿತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರೆ ಪುನೀತ್ ರಾಜ್ ಕುಮಾರ್ ಅವರನ್ನೂ ನೆನೆಸಿಕೊಂಡಿದ್ದಾರೆ.

ಡಾ ರಾಜ್ ಕುಟುಂಬದಲ್ಲಿ ಯಾವತ್ತೂ ಇತರರಿಗೆ ಮಾದರಿಯಾಗಿದ್ದರು. ಆದರೆ ಯುವರಾಜ್ ವಿಚಾರದಲ್ಲಿ ಲೆಕ್ಕ ತಪ್ಪಿದೆ. ಅತ್ತ ಯುವ ತನ್ನ ಪತ್ನಿ ವಿರುದ್ಧ ಅಕ್ರಮ ಸಂಬಂಧದ ಆರೋಪ ಹೊರಿಸಿದರೆ ಇತ್ತ ಶ್ರೀದೇವಿ ತನ್ನ ಪತಿ ವಿರುದ್ಧ ನಟಿಯೊಬ್ಬರೊಂದಿಗೆ ಸಂಬಂಧವಿರುವುದಾಗಿ ಆರೋಪಿಸಿದ್ದಾರೆ.

ಈ ರೀತಿಯಾಗಿ ದೊಡ್ಮನೆ ಕುಟುಂಬ ಈಗ ಅನಗತ್ಯ ವಿಚಾರಕ್ಕೆ ಸುದ್ದಿಯಾಗುತ್ತಿದೆ. ಇದನ್ನು ಗಮನಿಸಿ ಕೆಲವು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಯಾಕೋ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ದೊಡ್ಮನೆ ಕುಟುಂಬ ಬೇಡದ ವಿಚಾರಕ್ಕೇ ಸುದ್ದಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ನಿಂತಾಗಲೂ ದೊಡ್ಮನೆಗೆ ರಾಜಕೀಯ  ಬೇಡವಾಗಿತ್ತು ಎಂದು ಸಾಕಷ್ಟು ಜನ ಹೇಳಿದ್ದುಂಟು. ಆದರೆ ಈಗ ಯುವರಾಜ್ ಕುಮಾರ್ ಅಕ್ರಮ ಸಂಬಂಧದ ಆರೋಪ-ಪ್ರತ್ಯಾರೋಪಗಳು ದೊಡ್ಮನೆ ಅಭಿಮಾನಿಗಳಿಗೆ ಬೇಸರ ತಂದಿದೆ. ಪುನೀತ್ ಇದ್ದಿದ್ದರೆ ಹೀಗೆ ಆಗಲು ಬಿಡುತ್ತಿರಲಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರ್ಡರ್ ಕೇಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್