Publish Date: Wed, 09 Sep 2020 (09:22 IST)
Updated Date: Wed, 09 Sep 2020 (09:29 IST)
ಬೆಂಗಳೂರು: ಡ್ರಗ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಬಂಧಿತರಾದ ನಟಿ ಸಂಜನಾ ಗಲ್ರಾನಿ ರಾತ್ರಿಯಿಡೀ ಊಟವೂ ಮಾಡದೇ ಕಣ್ಣೀರಿಡುತ್ತಾ ಕಾಲ ಕಳೆದಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶ ಕೊಡಿ ಎಂದು ಸಂಜನಾ ಸಿಸಿಬಿ ಪೊಲೀಸರಿಗೆ ಬೇಡಿಕೊಂಡಿದ್ದಾರೆ. ಆದರೆ ಅವಕಾಶ ಮಾಡಿಕೊಡಲಾಗಿಲ್ಲ. ಇನ್ನು ರಾತ್ರಿ ಊಟವನ್ನೂ ಬೇಡವೆಂದಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸಾಂತ್ವನ ಕೇಂದ್ರದಲ್ಲಿರುವ ಸಂಜನಾರನ್ನು ಇಂದೂ ಕೂಡಾ ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ.