Publish Date: Wed, 09 Sep 2020 (09:11 IST)
Updated Date: Wed, 09 Sep 2020 (09:18 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಬಂಧಿತರಾಗಿ ಸದ್ಯಕ್ಕೆ ಸಾಂತ್ವನ ಕೇಂದ್ರದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ-ಸಂಜನಾ ಗಲ್ರಾನಿ ಕಿತ್ತಾಡಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.
ಇಬ್ಬರೂ ನಟಿಮಣಿಯರನ್ನು ಒಂದೇ ಕೊಠಡಿಯಲ್ಲಿ ಇರಿಸಲಾಗಿದೆ. ರಾತ್ರಿ ಲೈಟ್ ಆಫ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ಕಿತ್ತಾಡಿಕೊಂಡಿದ್ದು, ಜಗಳ ತಾರಕಕ್ಕೇರಿ ರಾಗಿಣಿಗೆ ಎದೆನೋವು ಬಂದಿದೆ. ಬಳಿಕ ಪೊಲೀಸರು ವೈದ್ಯರನ್ನು ಕರೆಸಿ ರಾಗಿಣಿಗೆ ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ.