ಕನ್ನಡ ನಟಿ ಸಂಗೀತಾ ಭಟ್ ಅವರು ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಆಸ್ಪತ್ರೆಗೆ ದಾಖಲಾದ ಸಂಗೀತಾ ಭಟ್ ಮಹಿಳೆಯರಿಗೆ ಆರೋಗ್ಯ ಸಂದೇಶ ಕೊಟ್ಟಿದ್ದಾರೆ.
ಸಂಗೀತಾ ಭಟ್ ಅವರು ಹೈಸ್ಟರೊಸ್ಕೋಪಿಕ್ ಪೊಲಿಫೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಗರ್ಭಾಶಯದೊಳಗೆ 1.75ಸೆಂ.ಮೀ.ಗಳಷ್ಟು ಬೆಳವಣಿಗೆಯಾದ ಗರ್ಭಾಶಯದ ಪಾಲಿಪ್ ಇರುವುದು ಪತ್ತೆಯಾಗಿದೆ. ಇದನ್ನ ಗರ್ಭಾಶಯದ ಗೆಡ್ಡೆ ಎಂದು ಹೇಳಿದ್ದಾರೆ.
ಈ ಕಾಯಿಲೆಯಿಂದ ರಕ್ತಸ್ರಾವ, ಮಾರಣಾಂತಿಕ ನೋವು, ಅನಿಯಮಿತ ಚಕ್ರಗಳು, ಹಾರ್ಮೋನುಗಳ ಅಡಚಣೆಗಳು, ಮೊಡವೆಗಳು, ತೂಕ ಹೆಚ್ಚಾಗುವುದು, ಕೂದಲು ಉದುರುವಿಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಈ ರೀತಿ ಗೆಡ್ಡೆ ಕಾಣಿಸಿಕೊಂಡ ಬಳಿಕ ಶಸ್ತ್ರ ಚಿಕಿತ್ಸೆಯ ಬಗ್ಗೆ ಅಂತಿಮವಾಗಿ ನಿರ್ಧರಿಸಲು ನನಗೆ ಒಂದು ತಿಂಗಳು ಬೇಕಾಯಿತು ಎಂದಿದ್ದಾರೆ ಸಂಗೀತಾ. ಕೆಲಸದ ಕಮಿಟ್ಮೆಂಟ್ ನಡುವೆ, ಅದನ್ನು ವಿಳಂಬ ಮಾಡುತ್ತಲೇ ಬಂದಿದ್ದ ಸಂಗೀತಾ ಭಟ್, ಪ್ರತಿ ಮಹಿಳೆಯರು ಅನಿಯಮಿತ ರಕ್ತಸ್ರಾವ, ಮುಟ್ಟಿನ ಸಮಯ, ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಿದ್ದರೆ ನಿರ್ಲಕ್ಷಿಸಬೇಡಿ ಎಂದು ಬರೆದುಕೊಂಡಿದ್ದಾರೆ.
ಈಚೆಗಷ್ಟೇ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದ ಸಂಗೀತಾ ಭಟ್ ಹಾಗೂ ಸುದರ್ಶನ್ ದಂಪತಿ ಅವರು ಮಕ್ಕಳು ಬೇಡವೆಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯಿತು. ಈ ವಿಚಾರಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.