ಈಚೆಗಷ್ಟೇ ತಮ್ಮ ಬಹುಕಾಲದ ಪ್ರೀತಿಯ ವಿಷಯವನ್ನು ಬಹಿರಂಗಪಡಿಸಿದ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಅವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
16 ವರ್ಷಗಳಿಂದ ಪ್ರೀತಿಸುತ್ತಿರುವ ನಿತಿನ್ ಹೆಸರಿನ ರಂಗಭೂಮಿ ಕಲಾವಿದನ ಜೊತೆ ಸುಹಾನಾ ಮದುವೆಯಾಗುತ್ತಿದ್ದು ಮದುವೆಯಲ್ಲಿ ವಿಶ್ವಮಾನವತ್ವದ ಧೋರಣೆ ಮೆರೆಯಲು ಹೊರಟಿದ್ದಾರೆ.
ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಸತಿಪತಿಯಾಗಲು ಹೊರಟಿದ್ದಾರೆ.
ಬೆಂಗಳೂರು ಹೊರವಲಯ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ಮಂತ್ರ ಮಾಂಗಲ್ಯ ವಿವಾಹ ಜರುಗಲಿದೆ. ವಧು ಮತ್ತು ವರನ ಕಡೆಯ ಹತ್ತಿರದ ಬಂಧುಗಳು ಹಾಗೂ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.
ಸುಹಾನಾ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪದಲ್ಲಿ ಶೋನಲ್ಲಿ ಹಿಜಬ್ ಧರಿಸಿ, ಹಿಂದೂ ಭಜನೆ ಹಾಡಿದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಬಹುಕಾಲದ ಗೆಳೆಯನ ಜತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.