ನಿರ್ದೇಶಕ ಗುರುದತ್ ಗಾಣಿಗ ಅವರ ಆ್ಯಕ್ಷನ್ ಕಟ್‌ನಲ್ಲಿ ಮೂಡಿಬರಲಿರುವ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸುಪ್ರಸಿದ್ಧ ಕಾದಂಬರಿ ಜುಗಾರಿ ಕ್ರಾಸ್ ತೆರೆಮೇಲೆ ಬರುತ್ತಿದೆ.
ಈಗಾಗಲೇ ಕರಾವಳಿ ಸಿನಿಮಾ ಮೂಲಕ ಭಾರೀ ಸದ್ದು ಮಾಡುತ್ತಿರುವ ನಿರ್ದೇಶಕ ಗುರುದತ್ ಇದೀಗ ಜುಗಾರಿ ಕ್ರಾಸ್‌ನ್ನು ದೊಡ್ಡ ಪರದೆ ಮೇಲೆ ತರಲಿದ್ದಾರೆ.
ಈ ಸಿನಿಮಾದ ನಟ ಯಾರೆಂಬ ಕುತೂಹಲ ಮೂಡಿತ್ತು. ಇದೀಗ ಟೀಸರ್‌ನಲ್ಲಿ ಈ ಎಲ್ಲ ಕುತೂಹಲಕ್ಕೆ ತೆರೆಬೀಳಿದೆ.
ಜುಗಾರಿ ಕ್ರಾಸ್‌ಗೆ ನಾಯಕನಾಗಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ತಲೆಬುರಡೆ, ಹರಿಯುತ್ತಿರುವ ರಕ್ತ, ಕೆಂಪು ರತ್ನ ಜೊತೆಗೆ ಭಾರೀ ಕುತೂಹಲವನ್ನು ಮೂಡಿಸುತ್ತಿದೆ.
ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ಕರಾವಳಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಿರ್ದೇಶಕ ಗುರುದತ್ ಮತ್ತು ರಾಜ್ ಬಿ ಶೆಟ್ಟಿ ಇದೀಗ ಜುಗಾರಿ ಕ್ರಾಸ್ ಮೂಲಕ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.