ರಾಜ್ ಬಿ ಶೆಟ್ಟಿ ಅವರು ಅಭಿನಯಿಸಿ, ನಿರ್ಮಾಣ ಮಾಡಿರುವ ಕನ್ನಡ ಸು ಫ್ರಮ್ ಸೋ ಸಿನಿಮಾ ಯಶಸ್ವಿಯಾಗಿ 25 ದಿನವನ್ನು ಪೂರೈಸಿದೆ. 
									
			
			 
 			
 
 			
					
			        							
								
																	ವಿಭಿನ್ನ ಕಥಾ ಹಂದರದ ಮೂಲಕ ಸದ್ದಿಲ್ಲದೆ ಥಿಯೇಟರ್‌ಗೆ ಬಂದು ಈ  ವರ್ಷದ ಕನ್ನಡ ಸಿನಿಮಾ ರಂಗಳದಲ್ಲಿ ಅತ್ಯಂತ ಹಿಟ್ ಸಿನಿಮಾವಾಗಿ ಹೊರಹೊಮ್ಮತು. 
									
										
								
																	₹5.50ಕೋಟಿ ವೆಚ್ಚದಲ್ಲಿ ತಯಾರಾದ ಸಿನಿಮಾದ 25 ದಿನಗಳಲ್ಲಿ ₹100ಕೋಟಿ ಕ್ಲಬ್ ಸೇರಿ ಹೊಸ ಇತಿಹಾಸ ಬರೆದಿದೆ. 
ಕನ್ನಡ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ₹ 78.57 ಕೋಟಿ ಮತ್ತು ವಿದೇಶದಲ್ಲಿ ₹ 13 ಕೋಟಿ ಗಳಿಸಿದೆ, ಒಟ್ಟು ₹ 104.44 ಕೋಟಿ ಗಳಿಸಿದೆ.
									
											
							                     
							
							
			        							
								
																	ಜೆಪಿ ತುಮ್ಮಿನಾಡು ನಟಿಸಿ, ಆ್ಯಕ್ಷನ್ ಕಟ್ ಹೇಳಿರುವ ಸು ಫ್ರಮ್ ಸೋ ಸಿನಿಮಾ ಕಳೆದ ವರ್ಷದಿಂದ ಉತ್ತಮ ಸಿನಿಮಾಕ್ಕಾಗಿ ಕಾದು ಕುಳಿತಿದ್ದ ಕನ್ನಡ ಪ್ರೇಕ್ಷಕರಿಗೆ ಖುಷಿಯನ್ನು ನೀಡಿದೆ. ಕಾಮಿಡಿ, ಹಾರರ್ ಸಿನಿಮಾಗೆ ಗಡಿಯಾಚೆಗೂ ಇದೀಗ ಉತ್ತಮ ರೆಸ್ಪಾನ್ಸ್‌ನೊಂದಿಗೆ ಪ್ರದರ್ಶನಗೊಳ್ಳುತ್ತಿದೆ.