Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿ ತ್ರಿಬಲ್ ಆರ್ ನಟಿಯರಿಗೆ ಈಗಲೂ ಬೇಡಿಕೆ

ಸ್ಯಾಂಡಲ್ ವುಡ್ ನಲ್ಲಿ ತ್ರಿಬಲ್ ಆರ್ ನಟಿಯರಿಗೆ ಈಗಲೂ ಬೇಡಿಕೆ
ಬೆಂಗಳೂರು , ಶನಿವಾರ, 14 ಮೇ 2022 (11:02 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ದಿನಕ್ಕೊಂದು ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಕನ್ನಡದ ಅನೇಕ ನಟಿಯರು ತೆರೆ ಮೇಲೆ ಮಿಂಚುತ್ತಿದ್ದಾರೆ.  ಹಾಗಿದ್ದರೂ ತ್ರಿಬಲ್ ಆರ್ ನಟಿಯರ ಮೇಲಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ.
 

ತ್ರಿಬಲ್ ಆರ್ ನಟಿಯರೆಂದರೆ ರಕ್ಷಿತಾ, ರಮ್ಯಾ, ರಾಧಿಕಾ ಪಂಡಿತ್. ಈ ಮೂವರೂ ನಟಿಯರು ಕೆಲವೇ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ತಮ್ಮದೇ ಅಭಿಮಾನಿಗಳ ಬಳಗ ಹೊಂದಿದ್ದಾರೆ.

ರಕ್ಷಿತಾ ಪ್ರೇಮ್ ಮದುವೆಯಾದ ಮೇಲೆ ನಟನೆಗೆ ಗುಡ್ ಬೈ ಹೇಳಿ ಈಗ ನಿರ್ಮಾಪಕಿಯಾಗಿ ಮಿಂಚುತ್ತಿದ್ದಾರೆ. ಆದರೆ ರಮ್ಯಾ ಮತ್ತು ರಾಧಿಕಾ ಪಂಡಿತ್ ಹಲವಾರು ಸಮಯದಿಂದ ಸಿನಿಮಾ ಮಾಡಿಲ್ಲ.

ಹಾಗಿದ್ದರೂ ರಮ್ಯಾ, ರಾಧಿಕಾಗೆ ಈಗಲೂ ಅಭಿಮಾನಿಗಳು ಮತ್ತೆ ಯಾವಾಗ ಸಿನಿಮಾಗೆ ಬರ್ತೀರಾ ಎಂದು ಕೇಳುತ್ತಲೇ ಇರುತ್ತಾರೆ. ಈ ನಟಿಯರ ಮೇಲೆ ಅಭಿಮಾನಿಗಳಿಗೆ ಈಗಲೂ ಎಷ್ಟು ಕ್ರೇಜ್ ಇದೆ ಎಂದರೆ ಮತ್ತೆ ಇವರು ನಾಯಕಿಯಾಗಿ ಬಂದರೂ ಅವರನ್ನು ಮೊದಲಿನಂತೇ ಸ್ವೀಕರಿಸುವುದರಲ್ಲಿ ಅನುಮಾನವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

24 ವರ್ಷದ ದಾಂಪತ್ಯಕ್ಕೆ ಕೊನೆ ಹಾಡಿದ ನಟ ಸೊಹೈಲ್ ಖಾನ್