ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಇಂದು ಚುನಾವಣೆ ನಡೆಯುತ್ತಿದ್ದು, ಸಿನಿಮಾ ತಾರೆಯರು ವೋಟ್ ಮಾಡುವಂತೆ ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಕರೆಕೊಟ್ಟಿದ್ದರು.
ಇಂದು ಬೆಳಿಗ್ಗೆಯೇ ಕೆಲವು ಸಿನಿ ತಾರೆಯರು ವೋಟ್ ಮಾಡಿ ಇತರರಿಗೂ ವೋಟ್ ಮಾಡಲು ಪ್ರೇರೇಪಿಸಿದ್ದಾರೆ. ನಟಿ ಅಮೂಲ್ಯ, ಪತಿ ಜಗದೀಶ್ ಜೊತೆ ಬಂದು ಬೆಳಿಗ್ಗೆಯೇ ಮತ ಚಲಾಯಿಸಿದ್ದಾರೆ.
ಇವರಲ್ಲದೆ 777 ಚಾರ್ಲಿ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ತಮ್ಮ ತಾಯಿ ಜೊತೆಗೆ ಬಂದು ವೋಟ್ ಮಾಡಿದ್ದಾರೆ. ಇನ್ನಷ್ಟು ಸಿನಿ ತಾರೆಯರು ತಮ್ಮ ಮತಗಟ್ಟೆಗೆ ಬಂದು ವೋಟ್ ಮಾಡುವ ನಿರೀಕ್ಷೆಯಿದೆ.