Webdunia - Bharat's app for daily news and videos

Install App

ಸಂಕಷ್ಟದಲ್ಲಿ ಒಗ್ಗಟ್ಟಾದ ಸ್ಯಾಂಡಲ್ ವುಡ್ ತಾರೆಯರು

Webdunia
ಭಾನುವಾರ, 13 ಜೂನ್ 2021 (09:04 IST)
ಬೆಂಗಳೂರು: ಸಿನಿಮಾ ವಿಚಾರದಲ್ಲಿ ಎಷ್ಟೇ ಪೈಪೋಟಿಯಿರಲಿ, ಆದರೆ ಕೊರೋನಾದಿಂದಾಗಿ ಜನರು ಸಂಕಷ್ಟದಲ್ಲಿದ್ದಾಗ ಸ್ಯಾಂಡಲ್ ವುಡ್ ತಾರೆಯರು ಪರಸ್ಪರ ಒಗ್ಗಟ್ಟಾಗಿ ಕೈ ಜೋಡಿಸಿದ್ದು ಶ್ಲಾಘನೀಯ.


ಲಾಕ್ ಡೌನ್ ಘೋಷಣೆಯಾದಾಗ ಎಷ್ಟೋ ಜನ ಹೊಟ್ಟೆಗೆ ಹಿಟ್ಟಿಲ್ಲದೇ ಸಂಕಷ್ಟಕ್ಕೀಡಾದರು. ಇಷ್ಟು ದಿನ ತಮ್ಮನ್ನು ಮೆರೆಸುತ್ತಿದ್ದ ಅಭಿಮಾನಿಗಳು ಸಂಕಷ್ಟದಲ್ಲಿದ್ದಾರೆಂದು ಅರಿವಾದಾಗ ನಟ-ನಟಿಯರು ಆಹಾರ, ರೇಷನ್ ಕಿಟ್ ವಿತರಿಸಲು ಮುಂದಾದರು.

ರಿಯಲ್ ಸ್ಟಾರ್ ಉಪೇಂದ್ರ ಕಿಟ್ ನೀಡಲು ಮುಂದಾದಾಗ ಸಾಕಷ್ಟು ಸೆಲೆಬ್ರಿಟಿಗಳು ಅವರಿಗೆ ಆರ್ಥಿಕವಾಗಿ ನೆರವು ನೀಡಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಗಳಿಗೆ ನೆರವಾಗಿ ಎಂದು ಕರೆ ನೀಡಿದ್ದಕ್ಕೆ ಸಾಕಷ್ಟು ಕಲಾವಿದರು ಪ್ರಾಣಿಗಳ ದತ್ತು ತೆಗೆದುಕೊಳ್ಳುವ ಅಭಿಯಾನಕ್ಕೆ ಕೈ ಜೋಡಿಸಿದರು. ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಂದಿಗೆ ಸ್ವಂತ ಖಾತೆಯಿಂದ ತಲಾ 5 ಸಾವಿರ ರೂ. ನೀಡಿ ಹೃದಯವಂತಿಕೆ ಮೆರೆದರು. ಕಿಚ್ಚ ಸುದೀಪ್ ಆಹಾರ ಕಿಟ್ ಗಳನ್ನು ವಿತರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾರ್ಮಿಕರ ನೆರವಿಗೆ ಧನ ಸಹಾಯ ಮಾಡಿದರು. ತಮ್ಮನ್ನು ಸದಾ ಮೆರೆಸುವ ಅಭಿಮಾನಿಗಳಿಗೆ ನೆರವಾಗಲು ಕಲಾವಿದರು ಒಟ್ಟಾಗಿದ್ದು ನಿಜಕ್ಕೂ ಶ್ಲಾಘನೀಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತುಳು ಸಿನಿಮಾಗೆ ಎಂಟ್ರಿ ಕೊಟ್ಟ ಬ್ಯಾಂಗಲ್ ಬಂಗಾರಿ ಖ್ಯಾತಿಯ ಆಂಟೋನಿ, ರೂಪೇಶ್ ಶೆಟ್ಟಿ ಸಿನಿಮಾಗೆ ಗಾಯನ

ಡಿ ಫ್ಯಾನ್ಸ್ ಅಶ್ಲೀಲ ಮೆಸೇಜ್‌: ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ನಟಿ ರಮ್ಯಾ ದೂರು

₹72 ಕೋಟಿ ಆಸ್ತಿಯನ್ನು ಸಂಜಯ್‌ ದತ್‌ಗೆ ಬಿಟ್ಟು ಹೋದ ಮಹಿಳಾ ಅಭಿಮಾನಿ, ನಟ ಅದನ್ನೇನು ಮಾಡಿದ್ರೂ ಗೊತ್ತಾ

ಡಿ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌: ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ ಎಂದ ಪರಮೇಶ್ವರ್‌

ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ನಡುವೆ ಸರಿಯಿಲ್ವಾ: ರಿಷಭ್ ಈ ಒಂದು ಪೋಸ್ಟ್ ಎಲ್ಲದಕ್ಕೂ ಉತ್ತರ

ಮುಂದಿನ ಸುದ್ದಿ
Show comments