ನಿರ್ದೇಶಕರಲ್ಲ, ದುಬಾರಿ ಸಿನಿಮಾವೇ ಸದ್ಯಕ್ಕಿಲ್ಲ!: ನಿರ್ಮಾಪಕರ ಸ್ಪಷ್ಟನೆ

Webdunia
ಶನಿವಾರ, 12 ಜೂನ್ 2021 (10:46 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಸಬೇಕಿದ್ದ ‘ದುಬಾರಿ’ ಸಿನಿಮಾದಿಂದ ನಿರ್ದೇಶಕ ನಂದಕಿಶೋರ್ ಹೊರಬಂದಿದ್ದಾರೆ ಎಂಬ ಸುದ್ದಿ ನಿನ್ನೆ ಓಡಾಡಿತ್ತು. ಈ ಬಗ್ಗೆ ಈಗ ನಿರ್ಮಾಪಕ ಉದಯ್ ಕೆ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.


ಪೊಗರು ಜೋಡಿ ಧ್ರುವ-ನಂದಕಿಶೋರ್ ಕಾಂಬಿನೇಷನ್ ನ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ಅಭಿನಯಿಸಲಿದ್ದಾರೆ ಎಂಬುದೆಲ್ಲಾ ಪಕ್ಕಾ ಆಗಿತ್ತು. ಆದರೆ ಇದೀಗ ನಿರ್ದೇಶಕ ನಂದಕಿಶೋರ್ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿತ್ತು.

ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಉದಯ್ ಕೆ ಮೆಹ್ತಾ ‘ಈ ಸಿನಿಮಾದಿಂದ ನಿರ್ದೇಶಕ ನಂದಕಿಶೋರ್ ರನ್ನು ಹೊರಹಾಕಲಾಗಿದೆ ಎನ್ನುವ ಸುದ್ದಿಗಳೆಲ್ಲಾ ಆಧಾರ ರಹಿತ.ದುಬಾರಿಯನ್ನು ನಂದಕಿಶೋರ್ ಅವರೇ ನಿರ್ದೇಶಿಸಲಿದ್ದಾರೆ. ಸಿನಿಮಾದ ಹೆಚ್ಚಿನ ಭಾಗ ವಿದೇಶದಲ್ಲಿ ಚಿತ್ರೀಕರಣವಾಗಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯ. ಹೀಗಾಗಿ ಸಿನಿಮಾವನ್ನೇ ಕೆಲವು ದಿನಗಳ ಮಟ್ಟಿಗೆ ಮುಂದೂಡಿದ್ದೇವೆ’ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಣಬೀರ್ ಕಪೂರ್ ದೈವದ ಅಪಹಾಸ್ಯ ಮಾಡುತ್ತಿದ್ದಾಗ ಸುಮ್ಮನಿದ್ರಾ ರಿಷಬ್ ಶೆಟ್ಟಿ: ಅಸಲಿ ವಿಡಿಯೋ ಇಲ್ಲಿದೆ

ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

ಕಳೆದ ಸೀಸನ್‌ನಲ್ಲಿ ಧೂಳೇಬ್ಬಿಸಿದ ಈ ಜೋಡಿ , ಇನ್ಮುಂದೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಖ್ಯಾತ ಹಾಸ್ಯ ಕಲಾವಿದ ಉಮೇಶ್‌ ಇನ್ನಿಲ್ಲ, ಕಲಾ ಬದುಕಿಗೆ ಎಂಟ್ರಿ ಕೊಟ್ಟಿದೆ ರೋಚಕ

ನಿಮಗೂ ರೆಸ್ಟೋರೆಂಟ್‌ನಲ್ಲಿ ಹೀಗೇ ನಡೆಸಿಕೊಂಡರೆ ಒಕೆ ನಾ, ಗಿಲ್ಲಿಗೆ ಕಿಚ್ಚ ಸುದೀಪ್ ಪ್ರಶ್ನೆ

ಮುಂದಿನ ಸುದ್ದಿ
Show comments