Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ‘ರಾಝಿ’ ಚಿತ್ರದ ಟ್ರೇಲರ್ ನೋಡಿ ಸ್ಯಾಂಡಲ್ ವುಡ್ ನ ನಟಿಯರು ಹೇಳಿದ್ದೇನು…?

ಬಾಲಿವುಡ್ ನ ‘ರಾಝಿ’ ಚಿತ್ರದ ಟ್ರೇಲರ್ ನೋಡಿ ಸ್ಯಾಂಡಲ್ ವುಡ್ ನ ನಟಿಯರು ಹೇಳಿದ್ದೇನು…?
ಬೆಂಗಳೂರು , ಸೋಮವಾರ, 16 ಏಪ್ರಿಲ್ 2018 (06:24 IST)
ಬೆಂಗಳೂರು : ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದ ‘ರಾಝಿ’ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಅದೇರೀತಿ ಸ್ಯಾಂಡಲ್ ವುಡ್ ನ ನಟಿಯರು ಕೂಡ ಈ ಚಿತ್ರದ ಟ್ರೇಲರ್ ನೋಡಿ ಫಿದಾ ಆಗಿದ್ದಾರೆ.


ಜಂಗ್ಲಿ ಪಿಕ್ಚರ್ಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬಂದ  'ರಾಝಿ' ಚಿತ್ರದ ಟ್ರೇಲರ್ ನೋಡಿದ ಕನ್ನಡದ ನಟಿ ಮೇಘನಾ ಗಾಂವ್ಕರ್ ಅವರು,’ ಕನ್ನಡದಲ್ಲಿ ಇಂತಹ ಸಿನಿಮಾಗಳು ಬರಬೇಕು. ಮಹಿಳಾ ಪ್ರಧಾನ ಚಿತ್ರಗಳು ಹೆಚ್ಚಾಗಬೇಕು’ ಎಂದು ಟ್ವೀಟ್ ಮಾಡಿದ್ದಾರೆ. ಮೇಘನಾ ಅವರ ಈ ಟ್ವೀಟ್ ಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕೂಡ ಐ ಅಗ್ರೀ ಎಂದು ಮರು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಮೇಘನಾ ಗುಲ್ಜಾರ್  ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಆಲಿಯಾ ಭಟ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಅವರಿಗೆ ಜೋಡಿಯಾಗಿ ವಿಕಿ ಕೌಶಾಲ್ ಅಭಿನಯಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಪ್ರಿಯಾಂಕ ಚೋಪ್ರಾರವರ ರಿಯಲ್ ಚಾಂಪಿಯನ್ ಯಾರು ಗೊತ್ತಾ…?