Select Your Language

Notifications

webdunia
webdunia
webdunia
webdunia

ಚಿತ್ರರಂಗಕ್ಕೆ ಕಾಲಿಡುತ್ತಿದೆ ಅಮಿತಾಬ್ ಬಚ್ಚನ್ ರವರ ಮೂರನೇ ತಲೆಮಾರು!

ಚಿತ್ರರಂಗಕ್ಕೆ ಕಾಲಿಡುತ್ತಿದೆ ಅಮಿತಾಬ್ ಬಚ್ಚನ್ ರವರ ಮೂರನೇ ತಲೆಮಾರು!
ಮುಂಬೈ , ಭಾನುವಾರ, 15 ಏಪ್ರಿಲ್ 2018 (12:24 IST)
ಮುಂಬೈ : ಬಾಲಿವುಡ್ ನಲ್ಲಿ ಸ್ಟಾರ್ ನಟ ಎಂದು ಹೆಸರುಮಾಡಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಕುಟುಂಬದ ಮತ್ತೊಂದು ಕುಡಿ ಇದೀಗ ಚಿತ್ರರಂಗಕ್ಕೆ  ಕಾಲಿಡುತ್ತಿದೆ.


ನಟನೆಯನ್ನೇ ಜೀವನವನ್ನಾಗಿಸಿಕೊಂಡ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ಅಮೋಘವಾದ ನಟನೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಧರ್ಮಪತ್ನಿ ಜಯಾ ಬಚ್ಚನ್ ಅವರು ಕೂಡ ನಟಿಯಾಗಿದ್ದರು. ಹಾಗೆ ಇವರ ಮಗ ಅಭಿಷೇಕ್ ಬಚ್ಚನ್ ಹಾಗೂ ಸೊಸೆ ಐಶ್ವರ್ಯ ರೈ ಬಚ್ಚನ್ ಅವರು ಕೂಡ ಬಾಲಿವುಡ್ ನ ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಗಳಿಸಿದ್ದರು.


ಇದೀಗ ಅವರ ಮೊಮ್ಮಗ ಕೂಡ ಸಿನಿಮಾ ರಂಗಕ್ಕೆ ಕಾಲಿಡುವುದರ ಮೂಲಕ ಅಮಿತಾಬ್ ಬಚ್ಚನ್ ಅವರ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. ಅಮಿತಾಬ್ ಮತ್ತು ಜಯಾ ಬಚ್ಚನ್ ಮಗಳು ಶ್ವೇತಾ ನಂದ ಅವರ ಮಗ ಅಗಸ್ತ್ಯ ನಂದ ಈಗ ಕಿರುಚಿತ್ರವನ್ನ ನಿರ್ದೇಶನ ಮಾಡಿದ್ದಾರಂತೆ. ಈ  ಚಿತ್ರವನ್ನು ನೋಡಿದ ಅಮಿತಾಬ್ ಮತ್ತು ಜಯಾ ಅವರು ಇವನೊಬ್ಬ ಉತ್ತಮ ನಿರ್ದೇಶನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದಾರಂತೆ.  ಅಗಸ್ತ್ಯ ನಂದ ಕೇವಲ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾತ್ರವಲ್ಲದೇ, ಸಂಗೀತ ನಿರ್ದೇಶನ ಕೂಡ ಮಾಡುತ್ತಾರಂತೆ. ಹಾಗಾದರೆ ಅಗಸ್ತ್ಯ ನಂದ ಕೂಡ ತಾತನಷ್ಟೇ ಹೆಸರು ಗಳಿಸುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೇಜಿ ಕ್ವೀನ್ ರಕ್ಷಿತಾರವರು ಮತ್ತೆ ನಟಿಸುವುದಾದರೆ ಅದು ಈ ನಟನ ಜೊತೆಯಂತೆ