Publish Date: Sat, 14 Apr 2018 (08:12 IST)
Updated Date: Sat, 14 Apr 2018 (08:14 IST)
ಮುಂಬೈ : ನಟಿ ಶ್ರೀದೇವಿ ಮಗಳು ಜಾಹ್ನವಿ ಧರಿಸಿದ್ದ ಡ್ರೆಸ್ ಬಗ್ಗೆ ಕೆಟ್ಟದಾಗಿ ಬರೆದ ವೆಬ್ ಸೈಟ್ ಒಂದರ ಮೇಲೆ ಆಕೆಯ ಸಹೋದರ ನಟ ಅರ್ಜುನ್ ಕಪೂರ್ ಅವರು ಕಿಡಿಕಾರಿದ್ದಾರೆ.
ಇತ್ತೀಚೆಗೆ ಜಾಹ್ನವಿ ಕಪೂರ್ ಅವರು ಧರಿಸಿಕೊಂಡಿದ್ದ ಡ್ರೆಸ್ ಒಂದರ ಕುರಿತಾಗಿ ವೆಬ್ ಸೈಟ್ ಒಂದು ಸೆಕ್ಸಿ ಡ್ರೆಸ್ ಎಂದು ವರ್ಣಿಸಿ ಬರಹ ಪ್ರಕಟಿಸಿತ್ತು. ಇದನ್ನು ಗಮನಿಸಿದ ನಟ ಅರ್ಜುನ್ ಕಪೂರ್ ಅವರು ಕೋಪಗೊಂಡು ಟ್ವೀಟ್ ಮಾಡಿ,‘ ಇಂಥ ಬರಹ ಬರೆದವರಿಗೆ ನಾಚಿಕೆಯಾಗಬೇಕು. ನಿಮ್ಮ ಕಣ್ಣು ಏನನ್ನು ಹುಡುಕುತ್ತದೆ ಅನ್ನೋದು ಇದರಲ್ಲೇ ಗೊತ್ತಾಗುತ್ತೆ’ ಎಂದು ತಿಳಿಸುವುದರ ಮೂಲಕ ತಮ್ಮ ಸಹೋದರಿ ಜಾಹ್ನವಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ