ಸ್ಯಾಂಡಲ್ ವುಡ್ ಗೆ ಬರಬಹುದಾದ ಹಳೆಯ ಹೀರೋಯಿನ್ ಗಳ ಪುತ್ರಿಯರು

Webdunia
ಬುಧವಾರ, 15 ಜೂನ್ 2022 (08:30 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಬ್ಯುಸಿಯೆಸ್ಟ್ ಹೀರೋಯಿನ್ ಗಳಾಗಿದ್ದವರ ಪುತ್ರಿಯರು ಈಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬಹುದಾದವರ ಲಿಸ್ಟ್ ನಲ್ಲಿದ್ದಾರೆ. ಅವರು ಯಾರೆಂದು ನೋಡೋಣ.

ಸುಧಾರಾಣಿ ಪುತ್ರಿ ನಿಧಿ: ಸುಧಾರಾಣಿ ಒಂದು ಕಾಲದಲ್ಲಿ ಸೂಪರ್ ಹಿಟ್ ಚಿತ್ರಗಳ ಹೀರೋಯಿನ್. ಈಗ ಅವರ ಪುತ್ರಿ ನಿಧಿ ಹೀರೋಯಿನ್ ಆಗುವ ಎಲ್ಲಾ ಲಕ್ಷಣ ಹೊಂದಿದ್ದಾರೆ. ಹಿಂದೊಮ್ಮೆ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾಗೆ ಹೀರೋಯಿನ್ ಆಗುತ್ತಾರೆ ಎಂಬ ರೂಮರ್ ಗಳಿದ್ದರೂ ಸದ್ಯಕ್ಕೆ ಓದಿನಲ್ಲಿ ಬ್ಯುಸಿಯಾಗಿರುವ ಕಾರಣಕ್ಕೆ ಚಿತ್ರರಂಗದ ಕಡೆಗೆ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಶ್ರುತಿ: ನಟಿ ಶ್ರುತಿ ಕೃಷ್ಣ ಸಿನಿಮಾ, ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿ. ಎಷ್ಟೋ ಹೆಣ್ಣು ಮಕ್ಕಳ ಫೇವರಿಟ್ ನಟಿಯಾಗಿರುವ ಶ್ರುತಿ ಪುತ್ರಿ ಗೌರಿ ನೋಡಲು ಥೇಟ್ ಅಮ್ಮನಂತೇ ಇದ್ದಾರೆ. ಜೊತೆಗೆ ಅತ್ಯುತ್ತಮ ಗಾಯಕಿ ಕೂಡಾ. ಮುಂದೊಂದು ದಿನ ಚಿತ್ರರಂಗಕ್ಕೆ ಬಂದರೂ ಅಚ್ಚರಿಯಿಲ್ಲ.

ಮಾಲಾಶ್ರೀ ಪುತ್ರಿ ಅನನ್ಯಾ: ತಂದೆ ಕೋಟಿ ರಾಮು ನಿರ್ಮಾಪಕರು. ತಾಯಿ ಮಾಲಾಶ್ರೀ ಒಂದು ಕಾಲದ ಬ್ಯುಸಿಯೆಸ್ಟ್ ಹೀರೋಯಿನ್. ಮಾಲಾಶ್ರೀ ಪುತ್ರಿ ಅನನ್ಯಾಗೆ ರಕ್ತದಲ್ಲೇ ಕಲಾವಿದೆ ಇದ್ದಾಳೆ. ನೋಡಲು ಅಮ್ಮನಂತೇ ಸುಂದರಿ. ಚಿತ್ರರಂಗಕ್ಕೆ ಬರಲು ಇನ್ನೇನು ಬೇಕು ಎನ್ನುವಂತಿದ್ದಾರೆ ಅನನ್ಯಾ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments