Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಟ ಸತ್ಯಜಿತ್ ವಿರುದ್ಧ ಹೆತ್ತಮಗಳಿಂದ ಪೊಲೀಸರಿಗೆ ದೂರು

ಸ್ಯಾಂಡಲ್ ವುಡ್ ನಟ ಸತ್ಯಜಿತ್ ವಿರುದ್ಧ ಹೆತ್ತಮಗಳಿಂದ ಪೊಲೀಸರಿಗೆ ದೂರು
ಬೆಂಗಳೂರು , ಶನಿವಾರ, 13 ಫೆಬ್ರವರಿ 2021 (08:51 IST)
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ಪೋಷಕ ನಟ ಸತ್ಯಜಿತ್ ವಿರುದ್ಧ ಅವರ ಪುತ್ರಿಯೇ ಕಿರುಕುಳದ ಆರೋಪ ಮಾಡಿ ದೂರು ನೀಡಿದ್ದಾರೆ.


ಸತ್ಯಜಿತ್ ಮತ್ತು ಅವರ ಪುತ್ರರ ವಿರುದ್ಧ ಪುತ್ರಿ ಅಖ್ತರ್ ಸ್ವಲೇಹಾ ಹಲ್ಲೆ ಆರೋಪ ಮಾಡಿ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತುಂಬು ಗರ್ಭಿಣಿಯಾದ ನನಗೆ ಹಣ ಕೊಡುವಂತೆ ತಂದೆ ಮತ್ತು ಅಣ್ಣಂದಿರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಇತ್ತೀಚೆಗೆ ಯೂ ಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಸತ್ಯಜಿತ್, ತನ್ನ ಮಗಳಿಂದಲೇ ನನ್ನ ಜೀವನ ಹಾಳಾಯ್ತು. ಆಕೆಗಾಗಿ ಸಾಕಷ್ಟು ಸಾಲ, ಹಣ, ಆಸ್ತಿ ಕಳೆದುಕೊಂಡೆ ಎಂದಿದ್ದರು. ಇದೀಗ ಅದೇ ವಿಚಾರವೇ ಈ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.  ಆದರೆ ಪುತ್ರಿ ಮಾಡಿದ ಆರೋಪಗಳೆಲ್ಲಾ ಸು‍ಳ್ಳು. ಗಂಡನ ಮನೆಯವರೇ ಈ ರೀತಿ ಮಾಡಲು ಆಕೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಸತ್ಯಜಿತ್ ಖಾಸಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ನಿರ್ದೇಶಕನನ್ನು ನಾನು ನಂಬುವುದಿಲ್ಲ ಎಂದ ಬೋನಿ ಕಪೂರ್