Publish Date: Fri, 12 Feb 2021 (09:18 IST)
Updated Date: Fri, 12 Feb 2021 (09:21 IST)
ಬೆಂಗಳೂರು: ನಟಿ ಮೇಘನಾ ಸರ್ಜಾ ಇಂದು ಸರ್ಪೈಸ್ ಸುದ್ದಿಯೊಂದನ್ನು ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಮೇಘನಾ ಸರ್ಪೈಸ್ ಕೊಡುತ್ತೇನೆಂದು ಅಭಿಮಾನಿಗಳಿಗೆ ಚಮಕ್ ಕೊಟ್ಟಿದ್ದಾರೆ.
ಮೇಘನಾ ಇಂದು ತಮ್ಮ ಮಗನ ಫೋಟೋ, ಹೆಸರು ಬಹಿರಂಗಪಡಿಸಬಹುದೆಂದು ಎಲ್ಲರೂ ಕಾಯುತ್ತಿದ್ದರು. ಅದರಂತೆ ಮೇಘನಾ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಆದರೆ ಇದರಲ್ಲಿ ಜ್ಯೂನಿಯರ್ ಚಿರು ನಗುವಿನ ಧ್ವನಿಯನ್ನು ಮಾತ್ರ ಕೇಳಿಸಿದ್ದಾರೆ. ಫೋಟೋ ಫೆಬ್ರವರಿ 14 ರಂದು ಪ್ರಕಟಿಸುವುದಾಗಿ ಹೇಳಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.