Publish Date: Fri, 12 Feb 2021 (08:49 IST)
Updated Date: Fri, 12 Feb 2021 (08:53 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಅಭಿಮಾನಿಗಳನ್ನು ಓಲೈಸಲು ಹೋಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳನ್ನು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ಅಭಿಮಾನಿಗಳ ಬಗ್ಗೆ ಜಗ್ಗೇಶ್ ಹೇಳಿದ ಮಾತಿನ ವಿಡಿಯೋವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ. ವಿಶೇಷವೆಂದರೆ ದರ್ಶನ್ ಅಭಿಮಾನಿ ಗುಂಪಿನವರೇ ಕೆಲವರು ಜಗ್ಗೇಶ್ ರನ್ನು ಬೆಂಬಲಿಸಿ ಮಾತನಾಡಿದ್ದು, ಯಾರೋ ಬೇಕೆಂದೇ ಕಿಡಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಗ್ಗೇಶ್ ಚಿತ್ರ ಪ್ರಚಾರಕ್ಕಾಗಿ ಫೇಕ್ ನ್ಯೂಸ್ ಹರಡುವವರ ಹುನ್ನಾರ. ಒಬ್ಬ ಚಿಕ್ಕ ಹುಡುಗನದು ಈ ಆಟ. ನಾನು ಏನು ಅಂತ ನನ್ನ ಬಲ್ಲವರಿಗೆ ತಿಳಿದಿದೆ. ಇಂಧ ವಿಷಯಕ್ಕೆ ಹೃದಯ ಅಗೆದು ತೋರುವ ಅವಶ್ಯಕತೆ ಇಲ್ಲ. ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳಿತು ಎಂದು ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.