Publish Date: Thu, 14 May 2020 (09:27 IST)
Updated Date: Thu, 14 May 2020 (09:29 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ಮೈಕಲ್ ಮಧು ವಿಧಿವಶರಾಗಿದ್ದಾರೆ. ನಿನ್ನೆ ಬೆಂಗಳೂರಿನ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಸಂಜೆ ವಿಧಿವಶರಾಗಿದ್ದಾರೆ. ತಮ್ಮ ವಿಶಿಷ್ಟ ಹೇರ್ ಸ್ಟೈಲ್, ಮ್ಯಾನರಿಸಂನಿಂದಲೇ ಪ್ರೇಕ್ಷಕರ ಮನಗೆದ್ದಿದ್ದ ಮಂಜು ಅನೇಕ ಕನ್ನಡ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಪಾತ್ರ ಮಾಡಿದ್ದರು. ಇಂದು ಅಂತ್ಯ ಸಂಸ್ಕಾರ ನೆರವೇರುವ ಸಾಧ‍್ಯತೆಯಿದೆ.