Select Your Language

Notifications

webdunia
webdunia
webdunia
webdunia

ಇನ್ನೂ ನಿಂತಿಲ್ಲ ದರ್ಶನ್ ಅನ್ನದಾಸೋಹ ಕಾರ್ಯಕ್ರಮ

ಇನ್ನೂ ನಿಂತಿಲ್ಲ ದರ್ಶನ್ ಅನ್ನದಾಸೋಹ ಕಾರ್ಯಕ್ರಮ
ಬೆಂಗಳೂರು , ಗುರುವಾರ, 14 ಮೇ 2020 (09:05 IST)
ಬೆಂಗಳೂರು: ಲಾಕ್ ಡೌನ್ ಘೋಷಣೆಯಾದಾಗಿನಿಂದ ಎಷ್ಟೋ ಮಂದಿ ಊಟವಿಲ್ಲದೇ ಪರದಾಡುತ್ತಿದ್ದಾರೆ. ಅಂತಹವರಿಗೆ ತಮ್ಮ ಕೈಲಾದ ಸಹಾಯ ಮಾಡಲು ಎಷ್ಟೋ ಸ್ಟಾರ್ ನಟರು ಮುಂದೆ ಬಂದಿದ್ದರು.


ಆದರೆ ಮೈಸೂರಿನಲ್ಲಿ ನಟ ದರ್ಶನ್ ಹೆಸರಿನಲ್ಲಿ ನಡೆಯುತ್ತಿರುವ ಅನ್ನದಾನ ಸೇವೆ ಮಾತ್ರ ಮೆಚ್ಚುವಂತಹದ್ದು. ಮೈಸೂರಿನ ದರ್ಶನ್ ಅಭಿಮಾನಿಗಳ ಬಳಗ ನಿರಂತರವಾಗಿ ಈಗಲೂ ಹಸಿದಿರುವ ಬಡವರಿಗೆ ಹಗಲು-ರಾತ್ರಿ ಊಟದ ವ್ಯವಸ್ಥೆ ಮಾಡುತ್ತಲೇ ಇದ್ದಾರೆ.

ಅದೂ ಎಲ್ಲಾ ರೀತಿಯ ಶುಚಿತ್ವ, ಸಾಮಾಜಿಕ ಅಂತರ ಕಾಯ್ದುಕೊಂಡು ನಿರಂತರವಾಗಿ ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಸ್ಥಳೀಯ ಸಚಿವರು, ಸಂಸದರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೇ ದರ್ಶನ್ ಮಾಸ್ ಹೀರೋ ಆಗಿ ಎಲ್ಲರ ಮನಗೆದ್ದಿರುವುದು ಎಂದರೂ ತಪ್ಪಾಗಲಾರದು.

Share this Story:

Follow Webdunia kannada

ಮುಂದಿನ ಸುದ್ದಿ

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಬಾಹುಬಲಿಯ ‘ಬಲ್ಲಾಳದೇವ’