Select Your Language

Notifications

webdunia
webdunia
webdunia
webdunia

ಸ್ವರ್ಗದಿಂದಲೇ ಸಿನಿಮಾ ಪ್ರಚಾರ ಮಾಡಿದ್ರು ಸಂಚಾರಿ ವಿಜಯ್!

ಸ್ವರ್ಗದಿಂದಲೇ ಸಿನಿಮಾ ಪ್ರಚಾರ ಮಾಡಿದ್ರು ಸಂಚಾರಿ ವಿಜಯ್!
ಬೆಂಗಳೂರು , ಮಂಗಳವಾರ, 21 ಸೆಪ್ಟಂಬರ್ 2021 (09:35 IST)
ಬೆಂಗಳೂರು: ಸಂಚಾರಿ ವಿಜಯ್ ಅಭಿನಯದ ಪುಕ್ಸಟೆ ಲೈಫ್ ಪುರುಸೊತ್ತೆ ಇಲ್ಲ ಎಂಬ ಸಿನಿಮಾ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಿನಿಮಾ ಸೆಪ್ಟೆಂಬರ್ 24 ರಂದು ತೆರೆಗೆ ಬರಲಿದೆ.


ಈ ಸಿನಿಮಾದ ಪ್ರಚಾರಕ್ಕೆ ಸಿನಿಮಾ ತಂಡ ವಿಶಿಷ್ಟವಾಗಿ ಪ್ರಚಾರ ಮಾಡಿದೆ. ಸಿನಿಮಾ ಪ್ರಚಾರಕ್ಕಾಗಿ ವಿಶೇಷ ಆನಿಮೇಟೆಡ್‍ ವಿಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ ಈ ವಿಡಿಯೋದಲ್ಲಿ ಸಂಚಾರಿ ವಿಜಯ್ ಚಿತ್ರರಂಗದ ದಿವಂಗತ ದಿಗ್ಗಜ ಕಲಾವಿದರೊಂದಿಗೆ ಸಿನಿಮಾ ನೋಡುವಂತೆ ಮನವಿ ಮಾಡುತ್ತಿರುವಂತೆ ಪ್ರಕಟಿಸಲಾಗಿದೆ.

ಈ ಆನಿಮೇಟೆಡ್ ವಿಡಿಯೋದಲ್ಲಿ ಸಂಚಾರಿ ವಿಜಯ್ ಜೊತೆಗೆ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಗಿರೀಶ್ ಕಾರ್ನಾಡ್ ಸೇರಿದಂತೆ ದಿಗ್ಗಜ ಕಲಾವಿದರ ಆನಿಮೇಟೆಡ್ ಪಾತ್ರಧಾರಿಗಳ ಸಂಭಾಷಣೆಯಿದೆ. ಇವರೆಲ್ಲರೊಂದಿಗೆ ವಿಜಯ್ ಚಿತ್ರ ವೀಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣ ಬಗ್ಗೆ ದುಬೈನಿಂದಲೇ ಮಾತನಾಡಿದ ಕಿಚ್ಚ ಸುದೀಪ್