Photo Courtesy: Instagram
ಮಲೇಷಿಯಾ: ಟ್ರಾವೆಲ್ ಪ್ರಿಯೆ ಆಗಿರುವ ನಟಿ ಸಮಂತಾ ರುತ್ ಪ್ರಭು ಅವರು ಸದ್ಯ ಮಲೇಷಿಯಾದಲ್ಲಿ ಹಾಲಿಡೇ ಎಂಜಾಯ್ ಮೂಡ್‌ನಲ್ಲಿದ್ದಾರೆ. ಸ್ವಿಮ್ ಸೂಟ್ ಹಾಕಿಕೊಂಡು ಪ್ರಕೃತಿ ಮಧ್ಯೆ ಕಾಲ ಕಳೆಯುತ್ತಿರುವ ಹಾಟ್ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಸಮಂತಾ ಅವರು 15 ಗಂಟೆಗಳ ಹಿಂದೆ ಹಂಚಿಕೊಂಡಿರುವ ಫೋಟೋಗಳಿಗೆ 2 ಕೋಟಿ ಲೈಕ್ಸ್, 12 ಸಾವಿರ ಮಂದಿ ಕಮೆಂಟ್ಸ್ ಮಾಡಿದ್ದಾರೆ.
ಕಮೆಂಟ್ಸ್ ಹೀಗಿದೆ: ನೀವು ಬೆಂಕಿ ಎಂದು ಒಬ್ಬರು ಬರೆದರೆ, ಮತ್ತೊಬ್ಬ ನೆಟ್ಟಿಗ ಒಂದು ಫೋಟೋದಲ್ಲಿ ಎರಡು ಸೌಂದರ್ಯವನ್ನು ಕಾಣುತ್ತಿದ್ದೇನೆ, ಒಂದು ನೀವು, ಇನ್ನೊಂದು ಪ್ರಕೃತಿ ಎಂದು ವರ್ಣಿಸಿದ್ದಾನೆ. ಈ ಫೋಟೋಗಳನ್ನು ನೋಡಿ ನಟ ನಾಗಚೈತನ್ಯ ಅವರು ಬಾತ್ ರೂಂನಲ್ಲಿ ಅಳುತ್ತಿರುಬಹುದು ಎಂದು ಕಾಲೆಳೆದಿದ್ದಾರೆ.
2017ರಲ್ಲಿ ನಟ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದ ಸಮಂತಾ ಅವರು 2021ರಲ್ಲಿ ಅವರಿಂದ ದೂರವಾಗುತ್ತಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ತಮ್ಮ ದಾಂಪತ್ಯ ಜೀವನಕ್ಕೆ ಬೇಗನೇ ಫುಲ್ ಸ್ಟಾಪ್ ನೀಡಿದ್ದು ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ವಿಚ್ಛೇಧನ ಪಡೆದಿರುವುದು ಯಾವ ಕಾರಣಕ್ಕಾಗಿ ಹಾಗೂ ಯಾರು ನೀಡಿರುವುದಾಗಿ ಎಂಬುದರ ಬಗ್ಗೆ ಇಬ್ಬರು ಮೌನವಾಗಿದ್ದರು. ಈ ಸುದ್ದಿ ಇಂದಿಗೂ ಚರ್ಚೆಯಲ್ಲೇ ಇದೆ. ಸಮಂತಾ ಈಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಬದುಕಿನಲ್ಲಿ ತುಂಬಾನೇ ನೋವನ್ನು ಅನುಭವಿಸದ್ದೇನೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದರು.
2022ರಲ್ಲಿ ನಟಿ ಸಮಂತಾ ಅವರು ಆಟೋ ಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅದಲ್ಲದೆ ಅದಕ್ಕೆ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದರು. ಇನ್ನೂ ಈ ಆರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ಕುಗ್ಗಿರುವುದಾಗಿ ಸಂದರ್ಶನವೊಂದರಲ್ಲಿ ಕಣ್ಣೀರನ್ನು ಹಾಕಿದ್ದರು. ಅದಲ್ಲದೆ ಸಿನಿಮಾಗಳಿಂದ ಬ್ರೇಕ್ ಪಡೆದು ಆರೋಗ್ಯದ ಕಡೆ ಗಮನ ಕೊಟ್ಟಿದ್ದರು. ಈಚೆಗೆ ಸಮಂತಾ ಅವರು ಸ್ನೇಹಿತ ಆಲ್ಕೇಸ್ ಜತೆ ಸೇರಿಕೊಂಡು ಟೇಕ್ 20 ಎಂಬ ಆರೋಗ್ಯದ ಪಾಡ್‌ಕಾಸ್ಟ್ ಅನ್ನು ಆರಂಭಿಸಿದ್ದಾರೆ.
ಖುಷಿ ಸಿನಿಮಾದಲ್ಲಿ ಇವರು ಕೊನೆಯಾದಾಗಿ ಅಭಿನಯಿಸಿದ್ದು, ಈ ವರ್ಷ ಮತ್ತೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.