Daily Horoscope

Select Your Language

Notifications

webdunia
webdunia
webdunia
webdunia

ಸೆಲೆಬ್ರಿಟಿಗಳು ಬೇರೆಯವರ ವ್ಯಾಟ್ಸಪ್ ಹ್ಯಾಕ್ ಮಾಡುತ್ತಾರೆ: ಕಂಗನಾ ರನೌವತ್ ಆರೋಪ

Kangana Ranaut
Photo Courtesy: Twitter
ಮುಂಬೈ: ಸದಾ ಒಂದಿಲ್ಲೊಂದು ಖಡಕ್ ಹೇಳಿಕೆಗಳಿಂದ ಇತರರ ಕೆಂಗಣ್ಣಿಗೆ ಗುರಿಯಾಗುವ ಬಾಲಿವುಡ್ ನಟಿ ಕಂಗನಾ ರನೌವತ್ ಈ ಬಾರಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಸಮಾಜದಲ್ಲಿ ಸೆಲೆಬ್ರಿಟಿಗಳು ಎನಿಸಿಕೊಂಡಿರುವ ಕೆಲವರು ಬೇರೆಯವರ ವ್ಯಾಟ್ಸಪ್ ಹ್ಯಾಕ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕಂಗನಾ ಆಗ್ರಹಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಬಾಲಿವುಡ್ ನ ದೊಡ್ಡ ಸೆಲೆಬ್ರಿಟಿಗಳ ವಿರುದ್ಧ ಕಂಗನಾ ಆರೋಪ ಮಾಡಿದ್ದು ಇದೆ.

ಸೆಲೆಬ್ರಿಟಿಗಳ ಮಕ್ಕಳು ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ವಿವಾಹಪೂರ್ವ ದೈಹಿಕ ಸಂಬಂಧ ಹೊಂದಿದ್ದಾರೆ ಎಂಬಿತ್ಯಾದಿ ಹೇಳಿಕೆಗಳ ಮೂಲಕ ಸಂಚಲನ ಮೂಡಿಸಿದ್ದರು. ಇದೀಗ ಖ್ಯಾತ ಸೆಲೆಬ್ರಿಟಿಗಳೇ ಇತರ ಸೆಲೆಬ್ರಿಟಿಗಳ ವ್ಯಾಟ್ಸಪ್ ಹ್ಯಾಕ್ ಮಾಡುತ್ತಾರೆ ಎಂಬ ಆರೋಪ ಮಾಡಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಕೇಂದ್ರ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ‘ಕೇಂದ್ರ ಸರ್ಕಾರ ಡಾರ್ಕ್ ವೆಬ್ ವಿಚಾರದಲ್ಲೂ ಏನಾದರೂ ಮಾಡಬೇಕು. ಹಲವು ಸಿನಿಮಾ ಸೆಲೆಬ್ರಿಟಿಗಳು ಡಾರ್ಕ್ ವೆಬ್ ನಿಂದ ಅಕ್ರಮ ವಸ್ತುಗಳನ್ನು ತರಿಸಿಕೊಳ‍್ಳಲ್ಲ. ಇತರರ ವ್ಯಾಟ್ಸಪ್ ಮತ್ತು ಈಮೇಲ್ ಹ್ಯಾಕ್ ಮಾಡುತ್ತಾರೆ. ಇದರ ಬಗ್ಗೆ ತನಿಖೆ ಮಾಡಿದರೆ ದೊಡ್ಡ ಸೆಲೆಬ್ರಿಟಿಗಳ ಲಿಸ್ಟೇ ಹೊರಬೀಳಲಿದೆ’ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Sridevi: ನಟಿ ಶ್ರೀದೇವಿ ಪುಣ್ಯತಿಥಿ: ಅವರ ಸಾವು ಇಂದಿಗೂ ನಿಗೂಢ