Select Your Language

Notifications

webdunia
webdunia
webdunia
webdunia

Sridevi: ನಟಿ ಶ್ರೀದೇವಿ ಪುಣ್ಯತಿಥಿ: ಅವರ ಸಾವು ಇಂದಿಗೂ ನಿಗೂಢ

Sridevi

Krishnaveni K

ಮುಂಬೈ , ಶನಿವಾರ, 24 ಫೆಬ್ರವರಿ 2024 (11:22 IST)
ಮುಂಬೈ: ಬಾಲಿವುಡ್ ನಟಿ, ಸಹಜ ಸುಂದರಿ ಶ್ರೀದೇವಿ ಕಪೂರ್ ಸಾವನ್ನಪ್ಪಿ ಇಂದಿಗೆ ಆರು ವರ್ಷವಾಗಿದೆ. ದಕ್ಷಿಣದಿಂದ ಬಾಲಿವುಡ್ ಗೆ ತೆರಳಿ ಹಿಂದಿ ಚಿತ್ರರಂಗವನ್ನೇ ಆಳಿದ್ದ ಶ್ರೀದೇವಿ ಸಾವು ಇಂದಿಗೂ ಒಂದು ಪ್ರಶ್ನೆಯಾಗಿ ಉಳಿದಿದೆ.

ದುಬೈಗೆ ನೆಂಟರ ಮದುವೆಯಲ್ಲಿ ಭಾಗಿಯಾಗಲು ತೆರಳಿದ್ದ ಶ್ರೀದೇವಿ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಆಗ ಅವರಿಗೆ ಕೇವಲ 54 ವರ್ಷ ವಯಸ್ಸು. ಅವರ ಸಾವು ಅಭಿಮಾನಿಗಳಿಗೆ ಶಾಕ್ ಆಗಿತ್ತು. ಬಾತ್ ಟಬ್ ನಲ್ಲಿ ಮುಳುಗಿದರೆ ಸಾಯಲು ಸಾಧ‍್ಯವಾ ಎಂದು ಅನೇಕರು ಅನುಮಾನಿಸುವಂತೆ ಮಾಡಿತ್ತು.

ಪತಿ ಬೋನಿ ಕಪೂರ್ ಪತ್ನಿಯ ಹಣಕ್ಕಾಗಿ ಕೊಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇನ್ನು ಕೆಲವರು ಶ್ರೀದೇವಿ ಕುಡಿತ ದಾಸಿಯಾಗಿದ್ದರು. ಹೀಗಾಗಿ ಮತ್ತಿನಲ್ಲಿ ನೀರಿಗೆ ಬಿದ್ದು ಸಾವನ್ನಪ್ಪಿದ್ದರು ಎಂದು ಸುದ್ದಿ ಮಾಡಿದರು. ಆದರೆ ಅವರ ಸಾವಿನ ತನಿಖೆ ಮಾಡಿದ್ದ ದುಬೈ ಪೊಲೀಸರು ಇದು ಸಹಜ ಸಾವೆಂದು ಷರಾ ಬರೆದರು. ಅದಾದ ಬಳಿಕ ಬೋನಿ ಕಪೂರ್ ಮೇಲಿನ ಆಪಾದನೆಗಳು ದೂರವಾದವು. ಆದರೆ ಅವರ ಅಪ್ಪಟ ಅಭಿಮಾನಿಗಳಿಗೆ ಇಂದಿಗೂ ಅವರ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

ಶ್ರೀದೇವಿಗೆ ಮೇಕಪ್ ಮೇಲೆ ತುಂಬಾ ಇಷ್ಟವಿತ್ತು. ಇದೇ ಕಾರಣಕ್ಕೆ ಅವರ ಅಂತ್ಯಕ್ರಿಯೆ ವೇಳೆ ಮೇಕಪ್ ಹಾಕಿಸಿಯೇ ಅವರ ಅಂತ್ಯಕ್ರಿಯೆ ಮಾಡಲಾಯಿತು. ಅವರ ಸಾವಿನ ಬಳಿಕ ಪುತ್ರಿ ಜಾಹ್ನವಿ ಕಪೂರ್ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ತಾಯಿಯ ಹೆಸರು ಉಳಿಸುವಂತೆ ಜಾಹ್ನವಿ ಕೂಡಾ ಹಿಂದಿ ಮಾತ್ರವಲ್ಲದೇ ದಕ್ಷಿಣದ ಸಿನಿಮಾಗಳಿಗೂ ಲಗ್ಗೆಯಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಪುತ್ರಿ ಸುಹಾನಾ ಖರೀದಿಸಿದ ಆಸ್ತಿ ಬೆಲೆ ಅಬ್ಬಬ್ಬಾ!