Select Your Language

Notifications

webdunia
webdunia
webdunia
webdunia

ಜೇಮ್ಸ್ ಹಾಡಿನ ಮೂಲಕ ಸೈನಿಕರಿಗೆ ಸಲಾಂ

ಜೇಮ್ಸ್ ಹಾಡಿನ ಮೂಲಕ ಸೈನಿಕರಿಗೆ ಸಲಾಂ
ಬೆಂಗಳೂರು , ಶುಕ್ರವಾರ, 11 ಮಾರ್ಚ್ 2022 (16:58 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ನ ಎರಡನೇ ಹಾಡು ಇಂದು ಬಿಡುಗಡೆಯಾಗಿದೆ.

ಈ ಹಾಡಿನಲ್ಲಿ ದೇಶ ಕಾಯುವ ಯೋಧರಿಗೆ ಸಲಾಂ ಮಾಡಲಾಗಿದೆ. ಸೈನಿಕರ ಕುರಿತಾದ ಹಾಡಿನಲ್ಲಿ ಸ್ವತಃ ಪುನೀತ್ ಸೈನಿಕನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಆದರೆ ಶೂಟಿಂಗ್ ವೇಳೆ ಕಾಶ್ಮೀರದಲ್ಲಿ ಮಕ್ಕಳ ಜೊತೆಗೆ, ಸೈನಿಕರ ಜೊತೆಗೆ ಪುನೀತ್ ಕಳೆದ ಕ್ಷಣಗಳನ್ನು ತೋರಿಸಲಾಗಿದ್ದು, ಕಣ್ತುಂಬಿ ಬರುವಂತಿದೆ. ಮಾರ್ಚ್ 17 ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಬುಕ್ ಮೈ ಶೋನಲ್ಲಿ ಆನ್ ಲೈನ್ ಬುಕಿಂಗ್ ಆರಂಭವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೈಟಲ್ ಇಲ್ಲದ ಟೈಟಲ್ ಘೋಷಣೆ ಮಾಡಿದ ಉಪೇಂದ್ರ