Publish Date: Fri, 01 Dec 2023 (20:35 IST)
Updated Date: Fri, 01 Dec 2023 (20:39 IST)
ಹೈದರಾಬಾದ್: ಬಹುನಿರೀಕ್ಷಿತ ಸಲಾರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಲಾರ್ ಟ್ರೈಲರ್ ನಲ್ಲಿ ನಾಯಕ ಪ್ರಭಾಸ್ ಅಬ್ಬರವೇ ಹೈಲೈಟ್ ಆಗಿದೆ.
ಕೆಜಿಎಫ್, ಉಗ್ರಂನಂತಹ ಪಕ್ಕಾ ಮಾಸ್ ಸಿನಿಮಾಗಳ ನಿರ್ದೇಶಕ ಪ್ರಶಾಂತ್ ನೀಲ್ ರಿಂದ ಮತ್ತೊಂದು ಅಂತಹದ್ದೇ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೂಡಿಬಂದಿದೆ. ಸಲಾರ್ ಟ್ರೈಲರ್ ನಲ್ಲಿಯೇ ಪ್ರಭಾಸ್ ಅಬ್ಬರ ನೋಡಿ ಪ್ರೇಕ್ಷಕರ ಮೈ ರೋಮಾಂಚನಗೊಂಡಿದೆ.
ಇನ್ನು, ಥಿಯೇಟರ್ ನಲ್ಲಿ ಈ ಸಿನಿಮಾ ನೋಡುವ ಮಜವೇ ಬೇರೆ. ಸಲಾರ್ ಇಬ್ಬರು ಸ್ನೇಹಿತರ ನಡುವಿನ ಕತೆ ಎನ್ನುವುದು ಟ್ರೈಲರ್ ನೋಡಿದರೆ ಸ್ಪಷ್ಟವಾಗುತ್ತದೆ. ಪ್ರಭಾಸ್ ಮತ್ತು ಪೃಥ್ವಿ ರಾಜ್ ಸುಕುಮಾರನ್ ಸ್ನೇಹಿತರಾಗಿ ಅಭಿನಯಿಸಿದ್ದಾರೆ.
ಪ್ರಭಾಸ್ ದೇವ ಎನ್ನುವ ಪಾತ್ರದಲ್ಲಿ ವಿಜೃಂಬಿಸಿದರೆ ಪೃಥ್ವಿ ವರದರಾಜ್ ಪಾತ್ರದಲ್ಲಿ ಮಿಂಚಿದ್ದಾರೆ. ಇಬ್ಬರೂ ನಟರಿಗೂ ಇದು ಹೇಳಿ ಮಾಡಿಸಿದ ಪಾತ್ರವಿದು. ಡಿಸೆಂಬರ್ 22 ರಂದು ಚಿತ್ರ ತೆರೆಗೆ ಬರಲಿದೆ.