Publish Date: Fri, 22 Dec 2023 (12:50 IST)
Updated Date: Fri, 22 Dec 2023 (12:53 IST)
ಹೈದರಾಬಾದ್: ಬಹುನಿರೀಕ್ಷಿತ ಸಲಾರ್ ಸಿನಿಮಾ ಇಂದು ಬಿಡುಗಡೆಯಾಗಿ ಭಾರೀ ಪ್ರತಿಕ್ರಿಯೆ ಕಂಡುಬರುತ್ತಿದೆ. ಇದರ ನಡುವೆ ಪ್ರಭಾಸ್ ಅಭಿಮಾನಿಯೊಬ್ಬ ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ.
ಸಲಾರ್ ಸಿನಿಮಾ ಬಿಡುಗಡೆ ದಿನವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಥಿಯೇಟರ್ ಗಳ ಮುಂದೆ ಪ್ರಭಾಸ್ ದೊಡ್ಡ ದೊಡ್ಡ ಕಟೌಟ್ ಹಾಕಿದ್ದಾರೆ.
ಈ ನಡುವೆ ಪ್ರಭಾಸ್ ಅಭಿಮಾನಿಯೊಬ್ಬರು ಮನೆಯ ಬಳಿಯೇ ಕಟೌಟ್ ತೊಳೆಯುವಾಗ ವಿದ್ಯುತ್ ವೈರ್ ತಗುಲಿ ಸಾವನ್ನಪ್ಪಿದ್ದಾರೆ. ಬಾಲರಾಜು ಎಂಬ ಅಭಿಮಾನಿ ಸಾವನ್ನಪ್ಪಿದ್ದು, ಗಜೇಂದ್ರ ಎಂಬ ಅಭಿಮಾನಿ ಗಾಯಗೊಂಡಿದ್ದಾರೆ.
ಮೃತ ಬಾಲರಾಜು ರೆಬಲ್ ಸ್ಟಾರ್ ಪ್ರಭಾಸ್ ಅಪ್ಪಟ ಅಭಿಮಾನಿ. ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.