Select Your Language

Notifications

webdunia
webdunia
webdunia
webdunia

Salaar: ಬೆಳ್ಳಂ ಬೆಳಿಗ್ಗೆ ಥಿಯೇಟರ್ ಮುಂದೆ ಸಲಾರ್ ಮೇನಿಯಾ

Salaar: ಬೆಳ್ಳಂ ಬೆಳಿಗ್ಗೆ ಥಿಯೇಟರ್ ಮುಂದೆ ಸಲಾರ್ ಮೇನಿಯಾ
ಹೈದರಾಬಾದ್ , ಶುಕ್ರವಾರ, 22 ಡಿಸೆಂಬರ್ 2023 (08:40 IST)
ಹೈದರಾಬಾದ್: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಇಂದು ಬಿಡುಗಡೆಯಾಗಿದ್ದು, ಥಿಯೇಟರ್ ಗಳ ಮುಂದೆ ಪ್ರೇಕ್ಷಕರ ಸಾಗರವೇ ಕಂಡುಬಂದಿದೆ.

ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಾಯಕರಾಗಿರುವ ಸಲಾರ್ ಚಾಪ್ಟರ್ 1 ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ವೀಕ್ಷಕರ ನೂಕುನುಗ್ಗಲು ಕಂಡುಬಂದಿದೆ.

ಮೊದಲ ದಿನವೇ ಈ ಸಿನಿಮಾ 100 ಕೋಟಿ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರವಿದೆ. ಹಾಗಿದ್ದರೂ ಮಲ್ಟಿಪ್ಲೆಕ್ಸ್ ಮತ್ತು ಹೊಂಬಾಳೆ ಫಿಲಂಸ್ ನಡುವಿನ ಮುನಿಸು ಚಿತ್ರದ ಗಳಿಕೆ ಮೇಲೆ ಕೊಂಚ ಪರಿಣಾಮ ಬೀರಬಹುದು.

ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಸೇರಿದಂತೆ ಘಟಾನುಘಟಿಗಳ ತಾರಾಗಣ ಸಿನಿಮಾದಲ್ಲಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಕೆಜಿಎಫ್ 2 ಸಿನಿಮಾ ಬಳಿಕ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಮತ್ತೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡೀಪ್ ಫೇಕ್ ವಿಡಿಯೋ ಪ್ರಕರಣ, ದೆಹಲಿಯಲ್ಲಿ ನಾಲ್ವರ ಬಂಧನ