Select Your Language

Notifications

webdunia
webdunia
webdunia
webdunia

ಬಾಲಿವುಡ್‌ಗೆ ಗುಡ್‌ಬೈ ಹೇಳಿದ ಪ್ರಿಯಾಂಕಾ ಚೋಪ್ರಾ?

Priyanka Chopra
mumbai , ಶುಕ್ರವಾರ, 22 ಡಿಸೆಂಬರ್ 2023 (12:32 IST)
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಖ್ಯಾತಿ ಗಳಿಸುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಿಂದ ದೂರ ಉಳಿಯಲಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಡಿಸೆಂಬರ್‌ನಲ್ಲಿ ತಮ್ಮ ವೃತ್ತಿ ಜೀವನದ ಕುರಿತು ಬಹಿರಂಗ ಪಡಿಸಲಿದ್ದಾರಂತೆ.
 
ಖ್ಯಾತ ತಾರೆ ಪ್ರಿಯಾಂಕಾ ಛೋಪ್ರಾ ಸಿನಿಮಾ ವೃತ್ತಿಗೆ ಬ್ರೇಕ್ ತೆಗೆದುಕೊಳ್ತಾರಾ? ಅಥವಾ ಬಾಲಿವುಡ್ ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಡಿಸೆಂಬರ್‌ನಲ್ಲಿ ಪ್ರಿಯಾಂಕಾ ಛೋಪ್ರಾ ಘೋಷಣೆಯೊಂದನ್ನ ಮಾಡಲಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳಿಗೆ ಅಚ್ಚರಿ ಆಗಬಹುದು.
 
ಪ್ರಿಯಾಂಕಾ ಅಭಿನಯಿಸುತ್ತಿರುವ ಹಾಲಿವುಡ್ ಚಿತ್ರ ಅಲ್ಲದೇ ಅಮೇರಿಕಾದ ಟೆಲಿವಿಜನ್ ಶೋನಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ಇದಕ್ಕಾಗಿ ಅವರು ತುಂಬಾ ಉತ್ಸುಕದಲ್ಲಿದ್ದಾರಂತೆ. ಕೆಲ ಮೂಲಗಳ ಪ್ರಿಯಾಂಕಾ ಡಿಸೆಂಬರ್‌ನಲ್ಲಿ ಅಮೇರಿಕಾದಲ್ಲೇ ಸೆಟ್ಲ್ ಆಗೋ ಪ್ಲ್ಯಾನ್ ನಲ್ಲಿದ್ದಾರೆ.
 
ಕ್ವಾಂಟಿಕೋ 2ಗೆ ಹೆಚ್ಚಿನ ರೆಸ್ಪಾನ್ಸ್ನಿಂದಾಗಿ  ಪ್ರಿಯಾಂಕಾ ಅಲ್ಲಿಯೇ ವಾಸಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಅಮೇರಿಕಾದಲ್ಲಿ ಅಪಾರ್ಟ್ಮೆಂಟ್ ಕೂಡ ಖರೀದಿ ಮಾಡಿದ್ದಾರೆ.  ಇತ್ತ ಕಡೆ 'ಬೇವಾಚ್' ಚಿತ್ರದ ಬಳಿಕ ಹಾಲಿವುಡ್ ಚಿತ್ರದಲ್ಲಿ ನಟಿಸುವಂತೆ ಪಿಗ್ಗಿಗೆ ಆಫರ್‌ಗಳು ಬರುತ್ತಿವೆ. ಆದ್ದರಿಂದ ಬಾಲಿವುಡ್‌ ಚಿತ್ರರಂಗ  ಬೀಡುವ ಮನಸ್ಸು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
 
ಕೆಲ ಮೂಲಗಳ ಪ್ರಕಾರ ಇದುವರೆಗೂ ಬಾಲಿವುಡ್ ಚಿತ್ರರಂಗದಿಂದ ದೂರ ಉಳಿಯುವ ಬಗ್ಗೆ ಪ್ರಿಯಾಂಕಾ ಛೋಪ್ರಾ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗುತ್ತಿದೆ. ಈ ಕುರಿತು ಪ್ರಿಯಾಂಕಾ ಏನು ಹೇಳ್ತಾರೆ ಎನ್ನುವುದನ್ನು ಕಾದು ನೋಡ್ಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಡಂಕಿ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?