Webdunia - Bharat's app for daily news and videos

Install App

ಸೈಫ್ ಅಲಿ ಖಾನ್ ಕಸ ಇದ್ದಂತ್ತೆ, ನಟನ ವಿರುದ್ಧ ನಾಲಿಗೆ ಹರಿಬಿಟ್ಟ ಮಹಾರಾಷ್ಟ್ರ ಸಚಿವ

Sampriya
ಗುರುವಾರ, 23 ಜನವರಿ 2025 (11:58 IST)
Photo Courtesy X
ಮುಂಬೈ: ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಅವರು ತಮ್ಮ ಒಂದು ಹೇಳಿಕೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಈಚೆಗೆ ಚಾಕು ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ ಅವರನ್ನು ಕಸ ಎನ್ನುವ ಮೂಲಕ ಮತ್ತೇ ನಾಲಿಗೆ ಹರಿಬಿಟ್ಟಿದ್ದಾರೆ.

ಬಾಂಗ್ಲಾದೇಶಿಗಳು ಮುಂಬೈನಲ್ಲಿ ಏನು ಮಾಡುತ್ತಿದ್ದಾರೆ ನೋಡಿ. ಅವರು ಸೈಫ್ ಅಲಿಖಾನ್ ಅವರ ಮನೆಗೆ ಪ್ರವೇಶಿಸಿದರು, ಅವರು ಮೊದಲು ರಸ್ತೆಗಳ ಕ್ರಾಸಿಂಗ್‌ಗಳಲ್ಲಿ ನಿಲ್ಲುತ್ತಿದ್ದರು, ಈಗ ಅವರು ಮನೆಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ, ಬಹುಶಃ ಅವರನ್ನು (ಸೈಫ್) ಕರೆದುಕೊಂಡು ಹೋಗಲು ಬಂದಿರಬಹುದು. ಅದು ಒಳ್ಳೆಯದು, ಸೈಫ್ ಅಲಿ ಖಾನ್ ಕಸ ಎನ್ನುವ ಮೂಲಕ ಮತ್ತೇ ಸುದ್ದಿಯಲ್ಲಿದ್ದಾರೆ.

ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಸೈಫ್ ನೋಡುವಾಗ ನಿಜವಾಗಿಯೂ ಈತ ಚಾಕು ಇರಿತಕ್ಕೊಳಗಾಗಿದ್ದಾನಾ ಎಂಬ ಪ್ರಶ್ನೆ ಹುಟ್ಟುತ್ತದೆ. ಆತ ನೃತ್ಯ ಮಾಡುತ್ತಿದ್ದಾನಾ ಅಥವಾ ಹಲ್ಲೆಗೆ ಒಳಗಾದವರ ಹಾಗೇ ನಟಿಸುತ್ತಾನಾ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.

.ಆಸ್ಪತ್ರೆಯಿಂದ ಹೊರಗೆ ಬಂದಾಗ ನೋಡಿದೆ, ಚೂರಿ ಇರಿತವೋ ಅಥವಾ ನಟಿಸುತ್ತಿದ್ದಾನೋ ಎಂಬ ಅನುಮಾನ ಬಂದಿತ್ತು. ವಾಕಿಂಗ್ ಮಾಡುವಾಗ ಡ್ಯಾನ್ಸ್ ಮಾಡ್ತಾ ಇದ್ದ ಹಾಗೇ ಕಾಣುತ್ತದೆ ಎಂದಿದ್ದಾನೆ.

ತಮ್ಮ ಭಾಷಣದಲ್ಲಿ ಅವರು ಮುಸ್ಲಿಂ ನಟರು ಅಸ್ವಸ್ಥರಾದಾಗ, ಪ್ರತಿಯೊಬ್ಬ ರಾಜಕಾರಣಿಯೂ ಸಹಾಯ ಮಾಡಲು ಮುಂದೆ ಬರುತ್ತಾರೆ ಆದರೆ ಹಿಂದೂ ನಟರಿಗೆ ಹೀಗೇ ಆಗಿದ್ದಲ್ಲಿ ಯಾರೂ ಮುಂದೆ ಬರುವುದಿಲ್ಲ ಎಂದರು.

ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಸೈಫ್ ಅಲಿ ಖಾನ್ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡವು. ಅವರು ತುಂಬಾ ಆರೋಗ್ಯವಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಜನರು ಅಭಿಪ್ರಾಯಪಟ್ಟಿದ್ದಾರೆ<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಕೊಟ್ಟ ಮಾತಿನಂತೆ ನಡೆದ ಸಿಎಂ ರೇವಂತ್ ರೆಡ್ಡಿ, ನಾಟು ನಾಟು ಖ್ಯಾತಿಯ ಗಾಯಕನಿಗೆ ₹1 ಕೋಟಿ ಘೋಷಣೆ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments