Select Your Language

Notifications

webdunia
webdunia
webdunia
webdunia

ಸಾಹಸಸಿಂಹ ವಿಷ್ಣುವರ್ಧನ್ ಕಲಿತ ಶಾಲೆಯ ಸ್ಥಿತಿಗೆ ಮರುಗಿದ ಚಿತ್ರರಂಗ

ಸಾಹಸಸಿಂಹ ವಿಷ್ಣುವರ್ಧನ್ ಕಲಿತ ಶಾಲೆಯ ಸ್ಥಿತಿಗೆ ಮರುಗಿದ ಚಿತ್ರರಂಗ
ಬೆಂಗಳೂರು , ಬುಧವಾರ, 31 ಮಾರ್ಚ್ 2021 (10:20 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಓದಿದ ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ ಈಗ ಮುಚ್ಚುವ ಹಂತಕ್ಕೆ ಬಂದಿದೆ. ಇದರ ಬಗ್ಗೆ ಸ್ಯಾಂಡಲ್ ವುಡ್ ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.


ವಿಷ್ಣು ದಾದ ಕಲಿತ ಚಾಮರಾಜಪೇಟೆಯ ಸರ್ಕಾರಿ ಶಾಲೆಗೆ 150 ವರ್ಷ ತುಂಬುತ್ತಿದೆ. ಆದರೆ ಈ ವೇಳೆ ಈ ಸಂಭ್ರಮಾಚರಿಸುವ ಬದಲು ಶಾಲೆಯನ್ನೇ ಮುಚ್ಚಲು ತೀರ್ಮಾನಿಸಲಾಗಿದೆ. ಇದರ ಬಗ್ಗೆ ನಟ ರಿಷಬ್ ಶೆಟ್ಟಿ, ನಟಿ ಪ್ರಣೀತಾ ಸೇರಿದಂತೆ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಖೇದ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಈ ಶಾಲೆಯನ್ನು ಮುಚ್ಚುವ ಬದಲು ಸಹಾಯ ಮಾಡಬೇಕು. ನಮ್ಮ ಪ್ರಣೀತಾ ಫೌಂಡೇಶನ್ ಕಡೆಯಿಂದಲೂ ಶಾಲೆಗೆ ಅಗತ್ಯ ಸಹಾಯ ಮಾಡುವುದಾಗಿ ಪ್ರಣೀತಾ ಹೇಳಿದ್ದಾರೆ. ಸೆಲೆಬ್ರಿಟಿಗಳ ಈ ಟ್ವೀಟ್ ಗೆ ಅಭಿಮಾನಿಗಳೂ ಸ್ಪಂದಿಸುತ್ತಿದ್ದಾರೆ. ಈ ಮೂಲಕ ಶಾಲೆ ಉಳಿಸಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ಕೈಗೊಳ್ಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸ್ಪೆಷಲ್ ಫ್ರೆಂಡ್’ ರಕ್ಷಿತಾಗೆ ಡಿ ಬಾಸ್ ದರ್ಶನ್ ಸಂದೇಶ