Select Your Language

Notifications

webdunia
webdunia
webdunia
webdunia

ಕಿರುತೆರೆಯಲ್ಲಿ ಪೊಗರು ಸಿನಿಮಾ ಪ್ರಸಾರ ದಿನಾಂಕ ಬಹಿರಂಗ

ಕಿರುತೆರೆಯಲ್ಲಿ ಪೊಗರು ಸಿನಿಮಾ ಪ್ರಸಾರ ದಿನಾಂಕ ಬಹಿರಂಗ
ಬೆಂಗಳೂರು , ಬುಧವಾರ, 31 ಮಾರ್ಚ್ 2021 (09:50 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಬಿಡುಗಡೆಯಾಗಿ ಭರ್ಜರಿ ಗಳಿಕೆ ಮಾಡಿದ ಖ್ಯಾತಿಗೆ ಪಾತ್ರವಾಗಿದ್ದ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಈಗ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.


ಉದಯ ವಾಹಿನಿ ಪೊಗರು ಸಿನಿಮಾದ ಹಕ್ಕನ್ನು ಭರ್ಜರಿ ಮೊತ್ತಕ್ಕೆ ಪಡೆದುಕೊಂಡಿತ್ತು. ಸದ್ಯದಲ್ಲೇ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿರುವ ಸುಳಿವು ನೀಡಿತ್ತು. ಇದೀಗ ದಿನವೂ ಬಹಿರಂಗವಾಗಿದೆ.

ಈ ಯುಗಾದಿ ಸಂದರ್ಭದಲ್ಲಿ ಪೊಗರು ಕಿರುತೆರೆಯಲ್ಲೇ ಪ್ರ ಪ್ರಥಮ ಬಾರಿಗೆ ಪ್ರಸಾರವಾಗುವುದು ಖಚಿತವಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆಗೆ ರಶ್ಮಿಕಾ ಮಂದಣ್ಣ ಕೊನೆಯದಾಗಿ ಕನ್ನಡದಲ್ಲಿ ನಟಿಸಿರುವ ಸಿನಿಮಾ ಇದಾಗಿದೆ. ನಂದಕಿಶೋರ್ ನಿರ್ದೇಶನದ ಚಿತ್ರದ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ ಹಾಡುಗಳೂ ಸೂಪರ್ ಹಿಟ್ ಆಗಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಸೀಟಿಮಾರ್’ ಚಿತ್ರದ ಹೊಸ ಬಿಡುಗಡೆಯ ದಿನಾಂಕ ನಿಗದಿ