ಭೇಟಿಗೆ ಬಂದ ಸಾಧುಕೋಕಿಲಗೆ ನೋ ಎಂದಿದ್ದೇಕೆ ದರ್ಶನ್

Sampriya
ಮಂಗಳವಾರ, 23 ಜುಲೈ 2024 (14:53 IST)
Photo Courtesy X
ಬೆಂಗಳೂರು:ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಕನ್ನಡ ಇಂಡಸ್ಟ್ರಿಯ ಪ್ರಮುಖರು ಪರಪ್ಪನ ಅಗ್ರಹಾರದತ್ತ ಬರುತ್ತಿದ್ದಾರೆ.

ನಿನ್ನೆ ವಿನೋದ್ ರಾಜ್ ಅವರು ದಿನಕರ್ ತೂಗುದೀಪ್, ವಿಜಯಲಕ್ಷ್ಮೀ ಜತೆ ಹೋಗಿ ದರ್ಶನ್ ಅವರ ಜತೆ ಕೆಲಹೊತ್ತು ಮಾತುಕತೆ ನಡೆಸಿದರು. ಇಂದು ಸಂಗೀತ ನಿರ್ದೇಶಕ, ನಟ ಸಾಧುಕೋಕಿಲ ಅವರು ದರ್ಶನ್‌ರನ್ನು ಭೇಟಿಯಾಗಲೆಂದು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ಆದರೆ ಭೇಟಿಗೆ ಅವಕಾಶ ಸಿಗದ ಕಾರಣ ಸಾಧುಕೋಕಿಲ ವಾಪಾಸ್ಸಾಗಿದ್ದಾರೆ.

ಇನ್ನೂ ದರ್ಶನ್ ಅವರನ್ನು ವಾರದಲ್ಲಿ ಎರಡು ಬಾರಿ ಭೇಟಿಗೆ ಅವಕಾಶವಿದೆ. ಒಂದು ಬಾರಿ ಭೇಟಿಗೆ ಐದು ಮಂದಿಗೆ ಅವಕಾಶ ಇರುವ ನಿಯಮವಿದೆ. ಸೋಮವಾರ ದರ್ಶನ್ ಅವರ ಕುಟುಂಬ ಭೇಟಿಗೆ ಬಂದಿತ್ತು.ಇದೀಗ ಸಾಧುಕೋಕಿಲ ಅವರಿಗೆ ಅವಕಾಶ ಮಾಡಿಕೊಟ್ಟರೆ ಈ ವಾರ ಮತ್ತೇ ಫ್ಯಾಮಿಲಿಗೆ ಭೇಟಿಯಾಗಲು ಅವಕಾಶವಿರುವುದಿಲ್ಲ. ಆದ್ದರಿಂದ ಜೈಲು ಅಧಿಕಾರಿ ಸಾಧುಕೋಕಿಲ ಅವರಿಗೆ ಮುಂದಿನ ಬಾರಿ ದರ್ಶನ್ ಕುಟುಂಬದ ಜತೆ ಬಂದು ಅವರನ್ನು ಭೇಟಿಯಾಗಿ ಎಂದು ಹೇಳಿದ್ದಾರೆ.

ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಸಾಧುಕೋಕಿಲ ಅವರು, ʻʻನಾನು ಇಂದು ಭೇಟಿ ಮಾಡಿದರೆ ಈ ವಾರ ದರ್ಶನ್ ಅವರ ಕುಟುಂಬದವರಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡುತ್ತೇನೆ. ಮೀಡಿಯಾದವರು ವಿಡಿಯೋ ‌ಮಾಡಿದ್ದರಿಂದ ನನ್ನನ್ನು ಹೊರಗೆ ಕಳುಹಿಸಿಬಿಟ್ರು ಎಂದು ತಮಾಷೆ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments