Select Your Language

Notifications

webdunia
webdunia
webdunia
webdunia

ಟಾಕ್ಸಿಕ್ ಬಳಿಕ ಮತ್ತೊಂದು ಬಿಗ್ ಸ್ಟಾರ್ ಸಿನಿಮಾಗೆ ನಾಯಕಿಯಾದ ರುಕ್ಮಿಣಿ ವಸಂತ್

Rukmini Vasanth

Krishnaveni K

ಬೆಂಗಳೂರು , ಶುಕ್ರವಾರ, 29 ಆಗಸ್ಟ್ 2025 (18:23 IST)
ಬೆಂಗಳೂರು: ಟಾಕ್ಸಿಕ್, ಕಾಂತಾರ ಸಿನಿಮಾ ಬಳಿಕ ಸ್ಯಾಂಡಲ್ ವುಡ್ ನಟಿ ರುಕ್ಮಿಣಿ ವಸಂತ್ ಮತ್ತೊಂದು ಬಿಗ್ ಬಜೆಟ್ ಸ್ಟಾರ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸಪ್ತಸಾಗರದಾಚೆ ಎಲ್ಲೊ ಸಿನಿಮಾ ನಾಯಕಿಗೆ ಈಗ ಅದೃಷ್ಟದ ಮೇಲೆ ಅದೃಷ್ಟ ಖುಲಾಯಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ನಲ್ಲಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದಲ್ಲದೆ ರಿಷಭ್ ಶೆಟ್ಟಿಯವರ ಕಾಂತಾರ ಚಾಪ್ಟರ್ 1 ಸಿನಿಮಾಗೂ ರುಕ್ಮಿಣಿಯೇ ನಾಯಕಿ ಎಂದು ಇತ್ತೀಚೆಗಷ್ಟೇ ಘೋಷಣೆಯಾಗಿದೆ. ಇದೀಗ ರುಕ್ಮಿಣಿ ಮತ್ತೊಂದು ದೊಡ್ಡ ಸಿನಿಮಾ ಬುಟ್ಟಿಗೆ ಹಾಕಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಜ್ಯೂ. ಎನ್ ಟಿಆರ್ ನಟಿಸಲಿರುವ ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾಗೆ ರುಕ್ಮಿಣಿ ವಸಂತ್ ನಾಯಕಿಯಾಗಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ. ಈ ಸಿನಿಮಾ ಮುಂದಿನ ವರ್ಷ ಜೂನ್ ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿಡೀರ್ ಆಗಿ ಅಭಿಮಾನಿಗಳಿಗೆ ಒಂದು ಮೆಸೇಜ್ ಕೊಟ್ಟ ರಾಜ್ ಬಿ ಶೆಟ್ಟಿ