Select Your Language

Notifications

webdunia
webdunia
webdunia
webdunia

ತ್ರಿಬಲ್ ಆರ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ತ್ರಿಬಲ್ ಆರ್
ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ, ಜ್ಯೂ.ಎನ್ ಟಿಆರ್, ರಾಮ್ ಚರಣ್ ತೇಜ್ ಅಭಿನಯದ ಬಹುನಿರೀಕ್ಷಿತ ತ್ರಿಬಲ್ ಆರ್ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.


ಸಿನಿಮಾ ಮುಂದಿನ ವರ್ಷ ಜನವರಿ 12 ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಇನ್ನೂ ಚಿತ್ರತಂಡ ಅಧಿಕೃತ ಪ್ರಕಟಣೆ ಹೊರಬರಬೇಕಾಗಿದೆ.

ಇದಕ್ಕೂ ಮೊದಲು ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ವೇಳೆಗೆ ಚಿತ್ರ ಬಿಡುಗಡೆಯಾಗಬಹುದು ಎಂಬ ರೂಮರ್ ಇತ್ತು. ಆದರೆ ಕ್ರಿಸ್ ಮಸ್ ಗೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ, ಬಾಲಿವುಡ್ ನಲ್ಲಿ ರಣವೀರ್ ಸಿಂಗ್ ಅಭಿನಯದ ಕಪಿಲ್ ದೇವ್ ಜೀವನಾಧಾರಿತ ‘83’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಹೀಗಾಗಿ ತ್ರಿಬಲ್ ಆರ್ ಸಂಕ್ರಾಂತಿ ವೇಳೆ ತೆರೆಗೆ ಬರುವುದು ಬಹುತೇಕ ಪಕ್ಕಾ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಲ್ಲಿ ರಾಕಿ ಭಾಯಿ ಯಶ್ ಗೆ ಮುತ್ತಿಗೆ ಹಾಕಿಕೊಂಡ ಫ್ಯಾನ್ಸ್