Publish Date: Tue, 28 Sep 2021 (10:23 IST)
Updated Date: Tue, 28 Sep 2021 (10:24 IST)
ಮುಂಬೈ: ರಾಕಿಂಗ್ ಸ್ಟಾರ್ ಯಶ್ ಗೆ ಈಗ ಪರಭಾಷೆಗಳಲ್ಲೂ ಅಭಿಮಾನಿಗಳ ದಂಡೇ ಇದೆ. ಅವರು ಹೋದಲೆಲ್ಲಾ ಅಭಿಮಾನಿಗಳು ಸುತ್ತಿಕೊಳ್ಳುತ್ತಾರೆ.
ಇಂತಿಪ್ಪ ಯಶ್ ಈಗ ಮುಂಬೈಗೆ ತೆರಳಿದ್ದು, ಅಲ್ಲಿಯೂ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿದ್ದು, ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ. ಸೌತ್ ಸ್ಟಾರ್ ಯಶ್ ಜಾಹೀರಾತಿನ ಶೂಟಿಂಗ್ ಗಾಗಿ ಮುಂಬೈಗೆ ತೆರಳಿದ್ದರು.
ಈ ವೇಳೆ ಅವರನ್ನು ಕಾಣಲು ಅಭಿಮಾನಿಗಳ ದಂಡೇ ಹರಿದುಬಂದಿದೆ. ಇದರ ಜೊತೆಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಮಾತುಕತೆ ನಡೆಸುವುದೂ ಈ ಮುಂಬೈ ಭೇಟಿಯ ಉದ್ದೇಶ ಎಂಬ ಮಾತುಗಳು ಕೇಳಿಬರುತ್ತಿವೆ.