Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಸೆಲ್ಫೀ ನೀಡಲು 2 ಗಂಟೆ ನಿಂತೇ ಇದ್ದ ರಾಕಿಂಗ್ ಸ್ಟಾರ್ ಯಶ್

ಅಭಿಮಾನಿಗಳಿಗೆ ಸೆಲ್ಫೀ ನೀಡಲು 2 ಗಂಟೆ ನಿಂತೇ ಇದ್ದ ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು , ಶುಕ್ರವಾರ, 16 ಡಿಸೆಂಬರ್ 2022 (09:11 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮನ್ನು ನೋಡಲು ಬರುವ ಅಭಿಮಾನಿಗಳನ್ನು ಯಾವತ್ತಿಗೂ ನಿರಾಸೆ ಪಡಿಸಲ್ಲ. ಅದೇ ರೀತಿಯ ಘಟನೆಯೊಂದು ಇದೀಗ ನಡೆದಿದೆ.

ಸಂವಾದ ಕಾರ್ಯಕ್ರಮವೊಂದರಲ್ಲಿ ಯಶ್ ಭಾಗಿಯಾಗಿದ್ದರು. ಸಂವಾದದ ವೇಳೆ ಯಶ್ ರನ್ನು ನೋಡಲು ಅದೇ ಸಂಸ್ಥೆಯ ಸಿಬ್ಬಂದಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಆಯೋಜಕರು ಒಂದು ಗ್ರೂಪ್ ಸೆಲ್ಫೀ ತೆಗೆಯೋಣ ಎಂದರು.

ಆದರೆ ಯಶ್ ಜೊತೆ ಪ್ರತಿಯೊಬ್ಬರೂ ಫೋಟೋ ತೆಗೆಯಲು ಬಯಸಿದ್ದರು. ಇದನ್ನು ಮನಗಂಡ ಯಶ್ ಇಲ್ಲಾ ನಾನು ಪ್ರತಿಯೊಬ್ಬರ ಜೊತೆಗೂ ಫೋಟೋ ತೆಗೆಸಿಕೊಳ್ಳುತ್ತೇನೆ ಎಂದರು. ಯಶ್ ಮಾತಿಗೆ ಸ್ವತಃ ಆಯೋಜಕರು ಅವಾಕ್ಕಾದರು. ಯಾಕೆಂದರೆ ಎಲ್ಲರ ಜೊತೆ ಫೋಟೋ ತೆಗೆಯಲು ಯಶ್ ಒಂದು ಗಂಟೆಗೂ ಅಧಿಕ ಕಾಲ ನಿಲ್ಲಬೇಕಿತ್ತು. ಆದರೂ ಯಶ್ ತಮ್ಮ ಮಾತಿನಂತೇ ನಡೆದುಕೊಂಡರು. ಸರಿಸುಮಾರು 2 ಗಂಟೆಗಳ ಕಾಲ ನಿಂತು ಎಲ್ಲಾ ಅಭಿಮಾನಿಗಳ ಜೊತೆ ಸೆಲ್ಫೀಗೆ ಪೋಸ್ ಕೊಟ್ಟು ಖುಷಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಕೈ ಬಿಟ್ಟ ಬ್ಯಾಚುಲರ್ ಪಾರ್ಟಿಗೆ ಲೂಸ್ ಮಾದ ಯೋಗಿ