Select Your Language

Notifications

webdunia
webdunia
webdunia
Saturday, 5 April 2025
webdunia

ರಶ್ಮಿಕಾ ಮಂದಣ್ಣರನ್ನು ಬ್ಯಾನ್ ಮಾಡ್ಬೇಕಾ? ಶಿವಣ್ಣ ಪ್ರತಿಕ್ರಿಯೆ!

ಶಿವರಾಜ್ ಕುಮಾರ್
ಬೆಂಗಳೂರು , ಗುರುವಾರ, 15 ಡಿಸೆಂಬರ್ 2022 (09:30 IST)
Photo Courtesy: Twitter
ಬೆಂಗಳೂರು: ಕನ್ನಡ ಸಿನಿಮಾ ರಂಗವನ್ನು ಕಡೆಗಣಿಸುವ ರಶ್ಮಿಕಾ ಮಂದಣ್ಣರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ಗೆ ಹೋದ ಮೇಲೆ ಕನ್ನಡವನ್ನು ಕಡೆಗಣಿಸುತ್ತಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಹೆಸರು ಹೇಳದೇ ಸನ್ನೆ ಮೂಲಕ ಕಾಮೆಂಟ್ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಅವರನ್ನು ನಿಷೇಧಿಸಬೇಕು ಎಂಬ ಒತ್ತಾಯದ ಬಗ್ಗೆ ಶಿವರಾಜ್ ಕುಮಾರ್ ಗೆ ‘ವೇದ’ ಪ್ರೆಸ್ ಮೀಟ್ ನಲ್ಲಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿರುವ ಶಿವಣ್ಣ ‘ಈ ವಿಚಾರ ನನಗೆ ಗೊತ್ತಿಲ್ಲ. ನಾನು ಯಾರ ಸಿನಿಮಾ ಚೆನ್ನಾಗಿ ಹೋಗ್ತಿದೆಯಾ ಅಂತ ಮಾತ್ರ ನೋಡ್ತೀನಿ. ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಗೆಳೆಯರ ಬಳಗದಿಂದ ಚಿರು ಸರ್ಜಾಗೆ ಮರಣೋತ್ತರ 'ಕನ್ನಡ‌ ಕಲಾ ಭೂಷಣ' ಪ್ರಶಸ್ತಿ