Select Your Language

Notifications

webdunia
webdunia
webdunia
webdunia

ಎರಡು ವರ್ಷಗಳ ಬಳಿಕ ಶೂಟಿಂಗ್ ನಲ್ಲಿ ಭಾಗಿಯಾದ ರಾಕಿಂಗ್ ಸ್ಟಾರ್ ಯಶ್

Yash Toxic Movie

Krishnaveni K

ಬೆಂಗಳೂರು , ಗುರುವಾರ, 8 ಆಗಸ್ಟ್ 2024 (09:49 IST)
ಬೆಂಗಳೂರು: ಎರಡು ವರ್ಷಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇಂದಿನಿಂದ ಅವರ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಶೂಟಿಂಗ್ ಆರಂಭವಾಗಿದೆ.

ಕೆಜಿಎಫ್ 2 ಬಳಿಕ ಯಶ್ ಎರಡು ವರ್ಷ ಬ್ರೇಕ್ ತೆಗೆದುಕೊಂಡಿದ್ದಾರೆ. ಅಳೆದು ತೂಗಿ ಟಾಕ್ಸಿಕ್ ಎನ್ನುವ ಅದ್ಧೂರಿ ವೆಚ್ಚದ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಈ ಸಿನಿಮಾ ಸೆಟ್ಟೇರಿದೆ. ಇಂದಿನಿಂದ ಶೂಟಿಂಗ್ ಆರಂಭವಾಗಿದೆ.

ಟಾಕ್ಸಿಕ್ ಸಿನಿಮಾ ಕೆಲಸಗಳು ಆರಂಭವಾಗಿ ಒಂದೂವರೆ ವರ್ಷವಾಗಿದೆ. ಇದೀಗ ಯಶ್ ಲಕ್ಕಿ ನಂಬರ್ 8 ರಂದೇ ಶೂಟಿಂಗ್ ಆರಂಭವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದಿರುವ ಯಶ್ ‘ಪಯಣ ಶುರುವಾಗಿದೆ’ ಎಂದು ನಿರ್ಮಾಪಕರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.

ಟಾಕ್ಸಿಕ್ ಸಿನಿಮಾ ಶೂಟಿಂಗ್ ಆರಂಭಕ್ಕೆ ಮುನ್ನ ಯಶ್ ತಾವು ನಂಬುವ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದರು. ಈ ಸಿನಿಮಾ ಪ್ಯಾನ್ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಬರುತ್ತಿದೆ. ಮಲಯಾಳಂ ಮೂಲದ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಾಸ್‌ನ ಈ ಸೀಸನ್‌ ನಡೆಸಕ್ಕಾಗಲ್ಲ ಎಂದ ಸೌತ್‌ನ ಖ್ಯಾತ ನಟ