Publish Date: Thu, 21 Apr 2022 (10:23 IST)
Updated Date: Thu, 21 Apr 2022 (07:20 IST)
ಬೆಂಗಳೂರು: ಕೆಜಿಎಫ್ ನಂತಹ ಅದ್ಧೂರಿ, ಅತ್ಯದ್ಭುತ ಸಿನಿಮಾ ಮಾಡಿದ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ.
ಅವರಿಗೆ ಮುಂದಿನ ಸಿನಿಮಾಗಳನ್ನು ಮಾಡುವ ನಿರ್ದೇಶಕರೂ ಮುಂದೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಮಾಡುವಂತಹ ಕತೆಗಳನ್ನೇ ಹುಡುಕಬೇಕಾಗುತ್ತದೆ.
ಹೀಗಾಗಿ ಯಶ್ ಮುಂದಿನ ಸಿನಿಮಾ ಕತೆಯೂ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿಯೇ ಬಿಡುಗಡೆಯಾಗುವಂತಹ ಆಕ್ಷನ್ ಥ್ರಿಲ್ಲರ್ ಕತೆ ಹೊಂದಿದೆ ಎನ್ನಲಾಗುತ್ತಿದೆ. ಆದರೆ ಕತೆಗಳ ಆಯ್ಕೆ ವಿಚಾರದಲ್ಲಿ ಎಡವಿದರೆ ಈಗ ಪ್ರಭಾಸ್ ಗೆ ಆದಂತೆ ಸಾಲು ಸಾಲು ಸೋಲು ಕಾಣಬೇಕಾದೀತು. ಹೀಗಾಗಿ ಯಶ್ ಮುಂದಿನ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಎಚ್ಚರವಾಗಿರಬೇಕು.